ಉಡುಪಿ, ಅ 26 (DaijiworldNews/SM): ಸುರತ್ಕಲ್ ಟೋಲ್, ಹೆಜಮಾಡಿಯೊಂದಿಗೆ ವಿಲೀನವಾಗುತ್ತದೆ. ಆ ಬಳಿಕ ಹೆಜಮಾಡಿಯಲ್ಲೇ ಡಬಲ್ ಹಣ ಪಾವತಿಸಬೇಕು. ಸರಕಾರ ಜನರನ್ನು ಮಂಗ ಮಾಡಲು ಮುಂದಾಗಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಟೋಲ್ ಹಣವನ್ನು ಹೆಜಮಾಡಿಯಲ್ಲಿ ವಸೂಲಿ ಮಾಡ್ತಾರೆ. ಆ ಮೂಲಕ ಹಗಲು ದರೋಡೆ ಮುಂದುವರೆಯುತ್ತದೆ. ಸುರತ್ಕಲ್ ನಲ್ಲಿ ಟೋಲ್ ಗೇಟ್ ಮಾತ್ರ ತೆರವಾಗುವುದು. ಆದರೆ, ಸುಂಕವನ್ನು ಹೆಜಮಾಡಿಯಲ್ಲಿ ಪಾವತಿಸಬೇಕು. ಈ ಬಗ್ಗೆ ಯಾರೂ ಕೂಡ ಪ್ರಶ್ನೆ ಮಾಡುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.