ಮಂಗಳೂರು, ಅ 26 (DaijiworldNews/SM): ಕರ್ನಾಟಕ ರಾಜ್ಯಕ್ಕೆ ಅಭಿವೃದ್ಧಿ ಮಂತ್ರ ನೀಡಿದವರು ಕೆಂಪೇಗೌಡರು. ಬೆಂಗಳೂರು ಅಭಿವೃದ್ಧಿ ಆಗಲು ಕೆಂಪೇಗೌಡರೇ ಕಾರಣವಾಗಿದೆ. ಹೀಗಾಗಿ ಕೆಂಪೇಗೌಡರ ಎದುರು ಯಾವ ಟಿಪ್ಪೂ ಲೆಕ್ಕಕ್ಕಿಲ್ಲ ಎಂದು ಸಂಸದ ನಳಿನ್ ಕುಮಾರ್ ಹೇಳಿದ್ದಾರೆ.
ಟಿಪ್ಪು ಮತಾಂಧ ಅನ್ನೋದರಲ್ಲಿ ಸಂದೇಹ ಇಲ್ಲ. ಕೆಂಪೇಗೌಡರು ಸರ್ವ ಸಮುದಾಯವನ್ನು ಜತೆಗೂಡಿಸಿ ಬೆಂಗಳೂರನ್ನು ಕಟ್ಟಿದವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಮಂಗಳೂರಿನಲ್ಲಿ ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ಮೃತ್ತಿಕೆ ಸಂಗ್ರಹ ಅಭಿಯಾನದಲ್ಲಿ ಅವರು ಮಾತನಾಡಿದರು.