ಮಂಗಳೂರು,ಫೆ 18 (MSP): ಮೂಡಬಿದಿರೆ ಮೂಲದ ಖ್ಯಾತ ಛಾಯಗ್ರಾಹಕ ಜಿನೇಶ್ ಪ್ರಸಾದ್ ಅವರ ಛಾಯಚಿತ್ರವು ಪ್ರತಿಷ್ಠಿತ ಅಮೇರಿಕದ ಫೋಟೋಗ್ರಾಪಿಕ್ ಸೊಸೈಟಿಯ ಚಿನ್ನದ ಪದಕ ಬಹುಮಾನಕ್ಕೆ ಆಯ್ಕೆಯಾಗಿದೆ. ಓರಿಯಂಟ್ ಕ್ಯಾಮರಾ ಕ್ಲಬ್ ಆಯೋಜಿಸಿದ್ದ ಸ್ಪರ್ಧೆಯ ಪ್ರವಾಸಿ ವಿಭಾಗದ ಸ್ಪರ್ಧೆಯಲ್ಲಿ ಜಿನೇಶ್ ಪ್ರಸಾದ್ ಅವರ ಛಾಯಚಿತ್ರವು ಬಂಗಾರದ ಪದಕವನ್ನು ಗೆದ್ದುಕೊಂಡಿದೆ.
ಈ ಬಹುಮಾನವು ಜಿನೇಶ್ ಪ್ರಸಾದ್ ಅವರು ಈ ವರ್ಷದ ಸಾಲಿನಲ್ಲಿ ಪಡೆದ ಮೊದಲ ಅಂತರಾಷ್ಟ್ರೀಯ ಪುರಸ್ಕಾರವಾಗಿದೆ. ಇದೇ ಸ್ಪರ್ಧಾ ಕೂಟದ ಇತರ ವಿಭಾಗದಲ್ಲಿ ಜಿನೇಶ್ ಅವರ ಒಟ್ಟು 19 ಛಾಯಚಿತ್ರಗಳು ಸ್ಪರ್ಧೆಗೆ ಆಯ್ಕೆಗೊಂಡು ತೀರ್ಪುಗಾರ ಗಮನ ಸೆಳೆದಿವೆ . ಕಳೆದ ವರ್ಷ 15 ಕ್ಕಿಂತಲೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಬಹುಮಾನಗಳನ್ನು ಜಿನೇಶ್ ಪ್ರಸಾದ್ ಗೆದ್ದು ಕೊಂಡಿದ್ದರು.
ಬೋಸ್ನಿಯಾ ದೇಶದ ಎರಡು ಬಹುಮಾನಗಳು , ದಕ್ಷಿಣ ಆಫ್ರಿಕಾದ ಒಂದು ಬಹುಮಾನ, ಸರ್ಬಿಯ ದೇಶದ ಒಂದು ಬಹುಮಾನ, ಪುಣೆ ಅಂತರರಾಷ್ಟ್ರೀಯ ಡಿಜಿಟಲ್ ಫೋಟೋಗ್ರಾಪಿ ಸ್ಪರ್ಧೆಯ ಪದಕ , ಎಂ ಪಾ ಅಂತರರಾಷ್ಟ್ರೀಯ ಸ್ಪರ್ಧೆಯ ಎರಡು ಪದಕ , ಕಲ್ಕತ್ತಾ ಕ್ರಿಯೆಟಿವ್ ಕ್ಲಬ್ ನ ಎರಡು ಪುರಸ್ಕಾರಗಳು, ಇ.ಪಿ.ಸಿ ರಾಷ್ಟ್ರೀಯ ಸ್ಪರ್ಧೆಯ ಚಿನ್ನದ ಪದಕ ಸೇರಿದಂತೆ 15 ಕ್ಕೂ ಹೆಚ್ಚು ಪದಕಗಳನ್ನು 2018 ಸಾಲಿನಲ್ಲಿ ಜಿನೇಶ್ ಪ್ರಸಾದ್ ಅವರು ಗೆದ್ದುಕೊಂಡಿದ್ದರು.