ಕಾಪು, ಅ 25 (daijiworldNews/SM): ಗೋ ಕಳ್ಳಸಾಗಣೆ ಮಾಡುವವರನ್ನು ಬಿಡಿಸಲು ಮೊದಲು ಫೋನ್ ಕಾಲ್ ಮಾಡುವುದೇ ಇಲ್ಲಿನ ಶಾಸಕರು. ನಾವು ಮಾಡಿಟ್ಟ ಅಭಿವೃದ್ಧಿ ಕಾರ್ಯಗಳನ್ನು ತನ್ನದೇ ಕಾರ್ಯಕ್ರಮ ಎಂದು ಹೇಳುವ ಶಾಸಕರಿಗೆ ಎಲ್ಲಿದೆ ಪುರುಷಾರ್ಥ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಕಾಪು ಶಾಸಕ ಲಾಲಾಜಿಯವರ ವಿರುದ್ಧ ಗುಡುಗಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಕಾಪು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಕಾಪು ಶಾಸಕರು ಚುನಾವಣೆ ಹತ್ತಿರ ಬರುವ ಸಂದರ್ಭದಲ್ಲಿ ನಾನು ಅನುಷ್ಠಾನ ಮಾಡಿದ ಸಾಧನೆಗಳನ್ನೆಲ್ಲವನ್ನು ತನ್ನದೇ ಎಂದು ಬಿಂಬಿಸುವ ಕೆಲಸ ಕಾರ್ಯಕ್ಕೆ ತೊಡಗಿದ್ದಾರೆ. ಪ್ರಜ್ಷಾವಂತ ನಾಗರಿಕರಿಗೆ ಸುಳ್ಳು ಆಶ್ವಾಸನೆ ಕೊಟ್ಟು ಮಂಗ ಮಾಡುತ್ತಿದ್ದಾರೆ.
ಶಾಸಕರು ಅದನ್ನ ಕೈ ಬಿಡಬೇಕು ಏನು ಆಶ್ವಾಸನೆ ಕೊಟ್ಟಿದ್ದೀರಿ ನಮ್ಮ ಆಡಳಿತ ಬಂದರೆ ಎಂಟು ಸಾವಿರಕ್ಕೆ ಮನೆ ಬಾಗಿಲಿಗೆ ಮರಳನ್ನು ಮುಟ್ಟಿಸುತ್ತೆವೆ ಪ್ರಾಧಿಕಾರದಿಂದ ಬಹಳಷ್ಟು ಸಮಸ್ಯೆ ಆಗಿದೆ ಇದರಿಂದ ಜನರಿಗೆ ಮನೆ ಕಟ್ಟಲು ಸಾಧ್ಯವಾಗಲಿಲ್ಲ ಅಧಿಕಾರಕ್ಕೆ ಬಂದರೆ ಪ್ರಾಧಿಕಾರವನ್ನು ತೆಗೆದುಹಾಕುತ್ತೇವೆ ಇದು ಯಾವ ಪುರುಷತ್ವಕ್ಕೆ ಕೊಟ್ಟ ಭರವಸೆಗಳು . ಇವತ್ತು ಎರಡೆರಡು ಕಡೆ ಶುಲ್ಕವನ್ನು ಕೊಟ್ಟು ಬದುಕುವ ಪರಿಸ್ಥಿತಿ. ಟೋಲ್ ಗೆಟ್ ಬಗ್ಗೆ ಮಾತಾಡುವ ಶಕ್ತಿ ಇವರಿಗಿಲ್ಲ ಚುನಾವಣೆಯ ಸಂದರ್ಭದಲ್ಲಿ ದಾರಿತಪ್ಪಿಸುವ ಕೆಲಸ ಮಾಡ್ತಾ ಇದ್ದಾರೆ. ಅದನ್ನ ಕೈ ಬಿಡಬೇಕು ವಾರ್ಷಿಕ ವರ್ಷದ ರಾಜ್ಯ ದ ಬಜೆಟ್ 2,95,000 ಕೋಟಿ ಇದರಲ್ಲಿ ಎಸ್ಟಾಬ್ಲಿಷ್ಮೆಂಟಿಗೆ ಇರೋದು 2,10,000 ಕೋಟಿ ರೂಪಾಯಿ ಇದರಲ್ಲಿ ಉಳಿಯುವಂಥದು 40,000 ಕೋಟಿ ರೂಪಾಯಿ 1,36,000 ಕೋಟಿ ರೂಪಾಯಿ ಪೆಂಡಿಂಗ್ ಬಿಲ್ ಪೇಮೆಂಟ್ ಗೆ ಬಾಕಿ ಇದೆ. ಈ 40,000 ಕೋಟಿ ರೂಪಾಯಿ ಯಾವ ಅಭಿವೃದ್ಧಿ ಕಾರ್ಯಕ್ರಮಕ್ಕೆ ಕೊಡಲಿಕ್ಕೆ ಸಾಧ್ಯವಾಗುತ್ತದೆ ಮಂಜುರಾತಿಯಾದ ಶಿಲನ್ಯಾಸ ಕಾರ್ಯಕ್ರಮ ಮಾಡ್ತಾ ಇದ್ದಾರೆ ಶೀಲಾನ್ಯಾಸ ಕಾರ್ಯಕ್ರಮಗಳೆಲ್ಲ ಮುಂದೆ ಯಾವ ಸರಕಾರ ಬರುತ್ತದೆ ಆ ಸರಕಾರ ಪೇಮೆಂಟ್ ಮಾಡುವ ಅವಕಾಶ ಇರುತ್ತದೆ.
56,000 ಕೋಟಿ ಇದ್ದ ಸಾಲವನ್ನು 5 ಲಕ್ಷ ಕೋಟಿ ಸಾಲಕ್ಕೆ ಮುಟ್ಟಿಸಿದ್ದಾರೆ ಇದು ಸರಕಾರದ ಸಾಧನೆ. ಅದರಲ್ಲಿ 40% ಕಮಿಷನ್ ಹೊಡೆಯುವ ಕೆಲಸ ಕಾರ್ಯವನ್ನ ಮಾಡ್ತಾ ಇದ್ದಾರೆ. ಉಭಯ ಜಿಲ್ಲೆಯ ಮತದಾರರು ಪ್ರಜ್ಷಾವಂತರಾಗಿದ್ದಾರೆ. ಇದೇ ರೀತಿ ಪೊಳ್ಳು ಆಶ್ವಾಸನೆ ಗಳನ್ನು ಕೊಡುತ್ತಿದ್ದರೆ ಮುಂಬರುವ ಚುನಾವಣೆಯಲ್ಲಿ ಮತದಾರರು ಸರಿಯಾದ ಬುದ್ದಿ ಕಲಿಸಲಿದ್ದಾರೆ ಎಂದರು.