ಪುತ್ತೂರು, ಫೆ 18 (MSP): ಜಮ್ಮು-ಕಾಶ್ಮೀರದಲ್ಲಿ 44 ವೀರ ಯೋಧರ ಸಾವಿಗೆ ಕಾರಣವಾದ ಭೀಕರ ಉಗ್ರ ದಾಳಿ ವಿರುದ್ಧ ಸೇಡಿಗಾಗಿ ದೇಶಾದ್ಯಂತ ಭುಗಿಲೆದ್ದಿರುವ ಜನಾಗ್ರಹ ಒಂದೆಡೆ ಕೇಳಿಬರುತ್ತಿದ್ದರೆ, ಇನ್ನೊಂದೆಡೆ ಇದಕ್ಕೆ ಕುಮ್ಮಕ್ಕು ನೀಡಿದ ಪಾಕ್ ಸರ್ಕಾರದ ವಿರುದ್ಧ ಪ್ರತಿಕಾರ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ಉರಿ ದೇಶವನ್ನೇ ವ್ಯಾಪಿಸಿದೆ.
ಈ ನಡುವೆ ಪುತ್ತೂರಿನಲ್ಲಿ ನಡೆದ ಹಿಂದೂ ಚೈತನ್ಯ ಸಮಾವೇಶದಲ್ಲಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಉಗ್ರರ ವಿರುದ್ದ ಕಿಡಿಕಾರಿದ್ದಾರೆ. ಅವರು ಸಮಾವೇಶದ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚೆಗೆ ಪುಲ್ವಾಮದಲ್ಲಿ ಉಗ್ರರು ನಡೆಸಿದ ಪೈಶಾಚಿಕ ಕೃತ್ಯವನ್ನು ಕಂಡಾಗ ಹೊಟ್ಟೆ ಉರಿಯುತ್ತದ. ನಾನೊಬ್ಬ ದೈರ್ಯವಂತ ಸಂತನಾಗಿದ್ದೇನೆ, ಒಂದು ವೇಳೆ ಸಂತನಾಗದೆ ನಾನು ಸೈನಿಕನಾಗಿದ್ದರೆ, 100 ಉಗ್ರರನ್ನು ಗುಂಡಿಕ್ಕಿ ಕೊಂದು ಸಾಯುತ್ತಿದ್ದೆ. ನಾವು ಯಾರಿಗೂ ಭಯಪಡಬೇಕಿಲ್ಲ ನಾವು ಭಯಪಡಬೇಕಾಗಿದ್ದು ಈ ದೇಶದ ಸಂಸ್ಕೃತಿಗೆ ಅದು ಬಿಟ್ಟು ಉಗ್ರಗಾಮಿಗಳಿಗಲ್ಲ ಎಂದು ಆಕ್ರೋಶಭರಿತರಾಗಿ ಮಾತನಾಡಿದ್ದಾರೆ.
ಬಳಿಕ ಇದಕ್ಕೆ ಸ್ಪಷ್ಟನೆ ನೀಡಿದ ಅವರು, ಕೆಲವರು ನಾನು ಭಾವನಾತ್ಮಕ ವಾಗಿ ಮಾತನಾಡಿದ್ದೇನೆ ಅಂದುಕೊಂಡಿದ್ದಾರೆ. ಆದರೆ ನಾನು ಯೋಚನೆ ಮಾಡಿಯೇ ಮಾತನಾಡಿದ್ದೇನೆ. ಈ ಬಗ್ಗೆ ನಾನು ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಪತ್ರ ಬರೆಯುತ್ತೇನೆ. ನನಗೂ ಅವಕಾಶ ಸಿಕ್ಕರೆ ಉಗ್ರರನ್ನು ಸೆದೆಬಡಿಯಲು ಸಿದ್ದ ಎಂದು ಹೇಳಿದ್ದಾರೆ.