ಕಾರ್ಕಳ, ಅ 25 (daijiworldNews/HR): ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಗೋಪಾಲನೆಗೆ ಹಾಗೂ ಗೋದಾನಕ್ಕೆ ಭಾರೀ ಮಹತ್ವವಿದೆ. ಗೋವಿನ ಪಾಲನೆ ಮೂಲಕ ಇಡೀ ಕುಟುಂಬದ ಜೀವನದ ನಿರ್ವಹಣೆಯನ್ನು ಮಾಡಲು ಸಾಧ್ಯವಿದೆ. ಸ್ವಾವಲಂಬನೆಯಿಂದ ಸ್ವ ಉದ್ಯೋಗ ಕಂಡು ಕೊಳ್ಳಲು ಸಾಧ್ಯವಾಗುತ್ತದೆ. ಆ ಮೂಲಕ ಆರ್ಥಿಕತೆ ಕ್ರೋಡೀ ಕರಿಸಲು ಸಾಧ್ಯ. ಆದರೆ ಇತ್ತೀಚಿನ ವರ್ಷಗಳಲ್ಲಿ ಗೋ ಸಾಗಾಟಣೆಗೆ ದುಷ್ಕರ್ಮಿಗಳಿಂದ ಅಡ್ಡಿಯಾಗುತ್ತಿತ್ತು. ಸಂಕಷ್ಟಕ್ಕೊಳಗಾದ ಕುಟುಂಬಗಳನ್ನು ಗುರುತಿಸಿ ಅವರಿಗೆ ನೆರವಾಗುವುಕ್ಕೆ ಮುಂದಾಗಿ ಪ್ರತಿ ದೀಪಾವಳಿ ಹಬ್ಬದಂದು ಗೋದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸ್ಟೋನ್ ಕ್ರಶರ್ ಎಸೋಶಿಯೇಶನ್ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದರು.
ಬಜಗೋಳಿ ಗುರುನಗರದ ಸ್ವಗೃಹದಲ್ಲಿ ದೀಪಾವಳಿಯ ಪ್ರಯುಕ್ತ ಅರ್ಹ ಐದು ಕುಟುಂಬಗಳಿಗೆ ಐದು ಹಸು, ಕರುಗಳನ್ನು ದಾನವಾಗಿ ನೀಡಿ ಮಾತನಾಡಿದ್ದಾರೆ.
ಉಪತಹಶೀಲ್ದಾರ್ ಶಿವಪ್ರಸಾದ್ ಮಾತನಾಡಿ, ಗೋವಿನ ಹಾಲಿನಲ್ಲಿ ಹಲವಾರು ಪೋಷ್ಠಿಕಾಂಶಗಳು ಕೂಡಿದು ಮಕ್ಕಳ ಬಳವಣಿಗೆಗೆ ಪೂರಕವಾಗಿದೆ. ಉತ್ವನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಗಳಿವೆ. ರೈತಾಪಿ ಜನರು ಗೋವಿನ ಸೆಗಣಿ ಹಾಗೂ ಗೋಮೂತ್ರವನ್ನು ಕೃಷಿಗೆ ಉಪಯೋಗಿಸುತ್ತಿದ್ದಾರೆ. ಪ್ರತಿಯೊಂದು ಮನೆಯಲ್ಲೂ ಗೋವಿನ ಸಾಕಾಣಿಕೆ ಮಾಡಬೇಕೆಂದರು ತಿಳಿಸಿದರು.
ಪರಪ್ಪಾಡಿ ಶ್ರೀ ಮಹಾಲಿಂಗೇಶ್ಬವರ ದೇವಸ್ಥಾನದ ಪ್ರಧಾನ ಅರ್ಚಕ ರಾಮಕೃಷ್ಣ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾತೃಶ್ರೀ ಪ್ರೇಮಾ ಶೆಟ್ಟಿ, ರೂಪಾ ರವೀಂದ್ರ ಶೆಟ್ಟಿ, ಸಂಘ ಪರಿವಾದ ಮುಖಡರಾದ ಗಣೇಶ್ ಹೆಗ್ಡೆ, ಗಣಂತೇಶ್ ಭಟ್, ಮುಡಾರು ಗ್ರಾಮ ಪಂಚಾಯತ್ನ ಅಧ್ಯಕ್ಷ ಸುರೇಶ್ ಶೆಟ್ಟಿ ವೇದಿಕೆಯಲ್ಲಿದ್ದರು.
ಹಿಂದು ಜಾಗರಣ ವೇದಿಕೆಯ ಪ್ರಮುಖರಾದ ಪ್ರಶಾಂತ್ ನಾಯಕ್, ಗುರುಪ್ರಸಾದ್ ನಾರಾವಿ, ಶಿರ್ತಾಡಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.