ಬೆಳ್ತಂಗಡಿ, ಅ 25 (daijiworldNews/HR): ಒಂದೇ ಮನೆಯ ಇಬ್ಬರು ಮಕ್ಕಳು ಜ್ವರದಿಂದಾಗಿ ಮೃತಪಟ್ಟಿರುವ ಘಟನೆ ಮದ್ದಡ್ಕ ಗ್ರಾಮದ ಲಾಡಿ ಎಂಬಲ್ಲಿ ಸಂಭವಿಸಿದೆ.
ಅಬ್ಬಾಸ್ ಎಂಬವರ ಮಕ್ಕಳಾದ ಸಫಾನ್ (8) ಹಾಗೂ ಸಿನಾನ್ (4) ಮೃತರು.
ಮಕ್ಕಳಿಗೆ ಕೆಲವು ದಿನಗಳಿಂದ ಜ್ವರ ಕಾಣಿಸಿಕೊಂಡಿದ್ದು, ಸ್ಥಳೀಯವಾಗಿ ಚಿಕಿತ್ಸೆ ಪಡೆದು ಮಕ್ಕಳು ಮನೆಯಲ್ಲಿಯೇ ಇದ್ದರು. ಈ ನಡುವೆ ಇಬ್ಬರು ಮಕ್ಕಳಿಗೂ ಜ್ವರ ತೀವ್ರವಾಗಿದ್ದು ಬಳಿಕ ಇಬ್ಬರನ್ನೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಒರ್ವ ಬಾಲಕ ನಿನ್ನೆ ರಾತ್ರಿಯ ಸುಮಾರಿಗೆ ಮೃತಪಟ್ಟಿದ್ದು ಇನ್ನೋರ್ವ ಬಾಲಕ ಇಂದು ಮೃತಪಟ್ಟಿದ್ದಾನೆ.
ಇನ್ನು ಮನೆಯ ಇಬ್ಬರು ಮಕ್ಕಳನ್ನೂ ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.