ಪೆರ್ಲ, ಅ 25 (DaijiworldNews/MS): ತೆಂಗಿನ ಮರದಿಂದ ಬಿದ್ದ ಕಾರ್ಮಿಕರೋರ್ವರಾದ ಕೃಷ್ಣ ನಾಯ್ಕ (53)ಮೃತಪಟ್ಟಿದ್ದಾರೆ. ಎಣ್ಮಕಜೆ ಪಂಚಾಯತಿನ ಬೆದ್ರಂಪಳ್ಳ ಸಮೀಪ ಕುಕ್ಕಿಲ ಎಂಬಲ್ಲಿ ನಡೆದಿದ್ದು ಭಾನುವಾರ ಮಧ್ಯಾಹ್ನ ಮನೆ ಸಮೀಪ ಇದ್ದ ತೆಂಗಿನ ಮರದಿಂದ ಬಿದ್ದ ಕೃಷ್ಣ ನಾಯ್ಕರನ್ನು ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ಉನ್ನತ ಚಿಕಿತ್ಸೆಗೆ ಪೆರಿಯಾರಂ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು.
ಆದರೆ ಸಂಜೆ 6.30 ಗಂಟೆ ವೇಳೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಕೂಲಿ ಕಾರ್ಮಿಕರಾದ ಕೃಷ್ಣ ನಾಯ್ಕರು ಬಡ ಕುಟುಂಬಕ್ಕೆ ಏಕ ಮಾತ್ರ ಆಶ್ರಯವಾಗಿದ್ದು ಇದೀಗ ಇವರ ಅಗಲುವಿಕೆಯಿಂದ ಆಧಾರಸ್ತಂಭ ನಷ್ಟವಾಗಿದೆ.
ಮೃತರು ಪತ್ನಿ ಜಾನಕಿ ಮಕ್ಕಳಾದ ಯೋಗಿಶ್, ಅಶ್ವಿತ, ತನ್ವಿತ ಹಾಗೂ ಸಹೋದರಿ ಪುಷ್ಪಾ ಎಂಬವರನ್ನಗಲಿದ್ದಾರೆ.