ಕಾರ್ಕಳ, ಅ 25 (daijiworldNews/HR): ಹಲಾಲ್ ಮುಕ್ತ ಭಾರತವಾಗಬೇಕು. ಅದರಿಂದ ದೇಶ ಸುಭಿಕ್ಷೆಯಲ್ಲಿ ಇರಲು ಸಾಧ್ಯ. ಅದಕ್ಕಾಗಿ ಜನರಲ್ಲಿ ಜಾಗೃತಿ -ಅರಿವು ಮೂಡಿಸುವ ಅಗತ್ಯತೆ ಇದೆ. ಮಾಂಸ ಮಾತ್ರವಲ್ಲ ಎಲ್ಲಾ ವಸ್ತುಗಳ ಮೇಲೆ ಹಲಾಲ್ ಎಂದು ಮುದ್ರಿಸಿರುವುದು ಜಾತ್ಯತೀತ ಭಾರತದ ನಿಲುವಿಗೆ ವಿರುದ್ಧವಾಗಿದೆ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಹೋಟೆಲ್ ಪ್ರಕಾಶ್ನ ಸಭಾಂಗಣದಲ್ಲಿ ಆಯೋಜಿಸಿದ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ಕೇಂದ್ರ ಸರಕಾರವು ಮಾರಾಟಕ್ಕೆ ಯೋಗ್ಯವಾದ ವಸ್ತುಗಳಿಗೆ ಸರ್ಟಿಫಿಕೇಟ್ನ್ನು ಒಂದೆಡೆ ನೀಡಿತ್ತಿರುವಾಗ ಹಲಾಲ್ ಸರ್ಟಿಫಿಕೇಟ್ ಗೆ ಒಂದು ವಸ್ತುವಿನ ಮೇಲೆ ಸುಮಾರು 60 ಸಾವಿರ ರೂಪಾಯಿ ಕೊಡಬೇಕು. 140 ಉತ್ಪನ್ನಗಳು ಹಲಾಲ್ ಸರ್ಟಿಫಿಕೇಟ್ ಮೂಲಕ ಮಾರುಕಟ್ಟೆ ಇಳಿದಿರುವುದರಿಂದ ಕೋಟಿ ಗಟ್ಟಲೆ ವ್ಯವಹಾರ ವ್ಯವಹಾರ ನಡೆಯುತ್ತಿದ್ದು, ಆ ಮೊತ್ತವನ್ನು ಮೂಲಭೂತವಾದಿಗಳು ಭಯೋತ್ಪಾದನೆಗೆ ಹಾಗೂ ದೇಶದ ಅಶಾಂತಿಗೆ ಬಳಸಲಾಗುತ್ತಿದೆ ಎಂದು ಆರೋಪಿಸಿದರು.
ಅಜಾನ್ಗೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಹೊಸ ಅದೇಶವೊಂದನ್ನು ಹೊರಡಿಸಿ 10 ಸಾವಿರ ಮಸೀದಿ, 3 ಸಾವಿರ ದೇವಸ್ಥಾನ, 1400 ಚರ್ಚ್ಗಳಿಗೆ ಲೌಡ್ ಸ್ವೀಕರ್ ಬಳಸಲು ಅನುಮತಿ ನೀಡಿದೆ. ಇದು ಸರಕಾರದ ಮುರ್ಖತನವಾಗಿದೆ. ಸರಕಾರ್ಕಕೆ ಅನುಮತಿ ಕೊಡಲು ಬರುವುದಿಲ್ಲ. ಲೌಡ್ ಸ್ವೀಕರ್ ಕೆಳಗಿಳಿಸಿ ಅದನ್ನು ನಿಲ್ಲಿ ಸುವ ತಾಕತ್ತು ಸರಕಾರಕ್ಕಿಲ್ಲ. ರಾತ್ರಿ 10ರಿಂದ ಬೆಳಿಗ್ಗೆ 6ರ ತನಕ ಲೌಡ್ ಸ್ವೀಕರ್ ಹಾಕುವ ಆಗಿಲ್ಲ. ಸರಕಾರ, ಪೊಲೀಸ್ ಇಲಾಖೆಗೆ ಇದರ ಅರಿವು ಆಗುವುದಿಲ್ಲ. ಹಿಂದುಗಳು ಹಬ್ಬದ ಸಂದರ್ಭದಲ್ಲಿ ಡಿ ಜೆ ಹಾಕಿದಾಗ ಮಾತ್ರ ಅವರಿಗೆ ಸುಪ್ರೀಂ ಕೋರ್ಟ್ನ ಅದೇಶ ನೆನಪಿಗೆ ಬರುತ್ತಿದೆ ಎಂದರೆ ಬಿಜೆಪಿಯ ಆಳ್ವಿಕೆಯಲ್ಲಿ ಹಿಂದುಗಳು ಎರಡನೇ ದರ್ಜೆಯ ಪ್ರಜೆಗಳಾಗಿ ಜೀವನ ಸಾಗಿಸುವಂತ ಪರಿಸ್ಥಿತಿ ದೇಶದಲ್ಲಿ ಎದುರಾಗಿದೆ ಎಂದರು.
ಹಿಂದುತ್ವದ ಹೆಸರಿನಲ್ಲಿ ಬಹುತೇಕ ರಾಜ್ಯಗಳಲ್ಲಿ ಹಾಗೂ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ಪ್ರಖರ ಹಿಂದುತ್ವವೆಂದರೆ ತೀವ್ರ ಅಲರ್ಜಿ. ಆದುದರಿಂದಲೇ ನನ್ನಂತಹ ಹಲವರಿಗೆ ಬಿಜೆಪಿಯ ಬಾಗಿಲು ಮುಚ್ಚಿದೆ. ರಾಜಕೀಯದ ಪವರ್ ಇದ್ದಾಗ ಏನನ್ನು ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ಯಾವುದೇ ಕ್ಷೇತ್ರದಿಂದ ಸ್ವರ್ಧಿಗಿಳಿಯಲು ನಿರ್ಧಾರಕೈಗೊಳ್ಳಲಾಗಿದ್ದು, ಅದಕ್ಕೆ ಹಿಂದು ಕಾರ್ಯಕರ್ತರು, ವಿದ್ಯಾರ್ಥಿಗಳು, ವಿವಿಧ ಕ್ಷೇತ್ರದಲ್ಲಿ ಇರುವ ಅಸಂಖ್ಯಾತರು ಬೆಂಬಲಿಸಿ ಒತ್ತಾಯಿಸುತ್ತಿದ್ದಾರೆ ಎಂದಿದ್ದಾರೆ.
ಗೋ-ಮಾತೆಯ ರಕ್ಷಣೆ ಮುಂದಾದರೆ ರೌಡಿಶೀಟರ್ಗಳಾಗಿ ನ್ಯಾಯಾಲಯ, ಜೈಲು, ಪೊಲೀಸ್ ಸ್ಟೇಶನ್ ಎಂದು ಜೀವನ ಕಳೆಯ ಬೇಕಾದ ಪ್ರಸಂಗವು ಇದೇ ಬಿಜೆಪಿಯ ಅವಧಿಯಲ್ಲಿ ನಡೆಯುತ್ತಾ ಬಂದಿದೆ. ನನ್ನ ಮೇಲೆ ಹಾಕಿದ 107 ಕೇಸುಗಳ ಪೈಕಿ ಅತೀ ಹೆಚ್ಚು ಕೇಸುದಾಖಲಾಗಿರುವುದು ಬಿಜೆಪಿಯ ಅಧಿಕಾರದ ಅವಧಿಯಲ್ಲಿ. ಭಾರತೀಯವನಾಘಿರುವ ನನಗೆ ಇತ್ತಿಗೂ ಗೋವಾ ಪ್ರವೇಶಿಸಲು ಸಾಧ್ಯವಾಗದೇ 7 ವರ್ಷ ಕಳೆದಿದೆ. ಅಲ್ಲಿ ಅಧಿಖಾರದಲ್ಲಿ ಇರುವುದು ಬಿಜೆಪಿ ಎಂಬುವುದನ್ನು ಪರೋಕ್ಷವಾಗಿ ತೋರ್ಪಡಿಸಿದರು.
ಕಾಂಗ್ರೆಸ್ ಅವಧಿಯಲ್ಲಿ ನನಗೆ ನೀಡಿದ ಗನ್ಮ್ಯಾನ್ ರಕ್ಷಣೆಯನ್ನು ಬಿಜೆಪಿ ಸರಕಾರವು ಕಸಿದುಕೊಂಡಿತು. ಒತ್ತಡ ತಂದ ಮೇಲೆ ಈಗ ಗನ್ಮ್ಯಾನ್ ರಕ್ಷಣೆ ನೀಡಿದೆ. ರಕ್ಷಣೆ ನೀಡುವುದೆಂದರೆ ಅದು ಸರಕಾರದ ಮುಂದೆ ಭಿಕ್ಷೆ ಬೇಡುವುದಲ್ಲ ವೆಂದು ಇದೇ ಸಂದರ್ಭದಲ್ಲಿ ಪ್ರಮೋದ್ ಮುತಾಲಿಕ್ ಬಿಜೆಪಿ ಮುಖಂಡರ ವಿರುದ್ಧ ತಿರುಗಿ ಬಿದ್ದರು.
ಹಣದ ಮೇಲೆ ರಾಜಖಿಯ ಮಾಡಿದ ಬಿಜೆಪಿಗರು ಪರಮೇಶ್ ಮೇಸ್ತ್ರನ ಕೇಸು ಮುಚ್ಚಿ ಹಾಕುವಲ್ಲಿ ಕಾಂಗ್ರೆಸ್ನೊಂದಿಗೆ ಬಿಜೆಪಿ ಕೈಜೋಡಿಸಿದೆ. ಆ ಪ್ರಕರಣವು ಮರುತನಿಖೆ ನಡೆಸಿದರೆ ಸತ್ಯ ಸತ್ಯಾತೆಯೊಂದಿಗೆ ಪರಮೇಶ್ನ ಕೊಲೆ ಪ್ರಕರಣದಲ್ಲಿ ಭಾಗಿಗಳಾದ ಆರೋಪಿಗಳು ಜೈಲು ಸೇರುವುದು ಖಚಿತವೆಂದರು.
ಶ್ರೀರಾಮ ಸೇನೆಯ ಮುಖಂಡ ಆನಂದಶೆಟ್ಟಿ ಅಡ್ಯಾರು, ಹರೀಶ್ ಅಧಿಕಾರಿ ಅಜೆಕಾರು ಮೊದಲಾದವರು ಉಪಸ್ಥಿತರಿದ್ದರು.