ಮಂಗಳೂರು, ಅ 24 (DaijiworldNews/SM): ಸುರತ್ಕಲ್ ನಲ್ಲಿ ಕಾರ್ಯಾಚರಿಸುತ್ತಿರುವ ಅಕ್ರಮ ಟೋಲ್ ಗೇಟ್ ವಿರುದ್ಧ ಹೋರಾಟ ನಿರಂತರವಾಗಿದ್ದು, ಶತಾಯಗತಾಯ ಟೋಲ್ ಗೇಟ್ ತೆರವುಗೊಳಿಸಿಯೇ ಸಿದ್ದವೆಂದು ಹೋರಾಟ ಸಮಿತಿ ಹೇಳಿದೆ.
ಟೋಲ್ ತೆರವುಗೊಳಿಸುವ ತನಕ ಹೋರಾಟ ಮುಂದುವರೆಸಲಾಗುವುದು. ಅ. 28ರಿಂದ ಅಹೋರಾತ್ರಿ ಧರಣಿ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಮತ್ತೊಂದೆಡೆ ನ. 7ಕ್ಕೆ ಟೋಲ್ ಗೇಟ್ ತೆರವುಗೊಳಿಸಲು ಗಡುವು ನೀಡಲಾಗಿದೆ. ಆದರೆ, ಅದಕ್ಕೂ ಮುನ್ನವೇ ನಾವು ಹೋರಾಟ ಆರಂಭಿಸುತ್ತೇವೆ ಎಂದು ಮಂಗಳೂರಿನಲ್ಲಿ ಹೋರಾಟ ಸಮಿತಿ ಮುಖಂಡ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಅಕ್ಟೋಬರ್ 28ರಿಂದ ಅಹೋರಾತ್ರಿ ಧರಣಿ ಮುಂದುವರೆಯಲಿದ್ದು, ಟೋಲ್ ತೆರವುಗೊಳ್ಳುವ ತನಕ ಹೋರಾಟ ನಡೆಯಲಿದೆ.