ಪುಂಜಾಲಕಟ್ಟೆ, ಅ 23 (DaijiworldNews/SM): ಅಪ್ರಾಪ್ತ ಬಾಲಕಿಯನ್ನು ಕಿಡ್ನಾಪ್ ಮಾಡಿ ಆಕೆಯ ಮೇಲೆ ಲೈಂಗಿಕವಾಗಿ ದೌರ್ಜನ್ಯ ವೆಸಗಿದ ಬಗ್ಗೆ ಸಾಕ್ಷ್ಯವನ್ನು ಆಧರಿಸಿ ಆರೋಪಿ ಮೇಲೆ ಪೋಕ್ಸೊ ಪ್ರಕರಣ ದಾಖಲಿಸಿದ ಘಟನೆ ಪುಂಜಾಲಕಟ್ಟೆ ಪೋಲೀಸ್ ಠಾಣೆಯ ಲ್ಲಿ ನಡೆದಿದೆ.
ಪಾಂಡವರಕಲ್ಲು ನಿವಾಸಿ ನೌಶಾದ್ ಮೇಲೆ ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಈತನ ಬಂಧನಕ್ಕೆ ಪೋಲೀಸರು ಬಲೆ ಬೀಸಿದ್ದಾರೆ. ಕೆಲ ದಿನಗಳ ಹಿಂದೆ ಪಾಂಡವರಕಲ್ಲು ಎಂಬಲ್ಲಿನ ಹತ್ತನೇ ತರಗತಿ ಬಾಲಕಿಯೋರ್ವಳು ಕಾಣೆಯಾಗಿದ್ದ ಬಗ್ಗೆ ಹೆತ್ತವರು ಪುಂಜಾಲಕಟ್ಟೆ ಪೋಲೀಸ್ ಠಾಣೆಗೆ ದೂರು ನೀಡಿದ್ದು, ಕಿಡ್ನಾಪ್ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಚರಣೆ ನಡೆಸಿದ ಪುಂಜಾಲಕಟ್ಟೆ ಎಸ್.ಐ.ಸುತೇಶ್ ಬಾಲಕಿಯನ್ನುಅ.15 ರಂದು ಶನಿವಾರ ಮುಂಜಾನೆ ವೇಳೆ ಉಪ್ಪಿನಂಗಡಿಯಲ್ಲಿ ಪತ್ತೆ ಹಚ್ಚಿ ಠಾಣೆಗೆ ಕರೆದುಕೊಂಡು ಬಂದಿದ್ದರು. ಆ ಬಳಿಕ ವಿಚಾರಣೆ ನಡೆಸಿ ಬಾಲಕಿಯನ್ನು ವೈದ್ಯಕೀಯ ಚಿಕಿತ್ಸೆ ಗಾಗಿ ಹಾಗೂ ಕೌನ್ಸಿಲಿಂಗ್ ಗಾಗಿ ವೈದ್ಯ ರ ಬಳಿ ಕಳುಹಿಸಲಾಗಿತ್ತು.
ಇದೀಗ ವೈದ್ಯಕೀಯ ರಿಪೋರ್ಟ್ ಬಂದಿದ್ದು, ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯದ ಬಗ್ಗೆ ವೈದ್ಯ ರು ವರದಿ ನೀಡಿದ್ದಾರೆ. ಈ ವರದಿಯನ್ನು ಆಧರಿಸಿ ಪುಂಜಾಲಕಟ್ಟೆ ಪೋಲಿಸರು ಯುವಕನ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿ ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ. ಆರೋಪಿ ಕೆಲ ಸಮಯಗಳಿಂದ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ಇತ್ತೀಚೆಗೆ ಮೈಸೂರಿನಲ್ಲಿ ಕೆಲಸಕ್ಕೆ ಸೇರಿದ್ದ ಎನ್ನಲಾಗಿದೆ.
ನೆರೆ ಮನೆಯ ಯುವಕನೇ ಕಿಡ್ನಾಪ್ ಆರೋಪಿ
ಆರೋಪಿ ಯುವಕ ನೌಶಾದ್ ಪಾಂಡವರಕಲ್ಲು ಬಾಲಕಿಯ ನೆರೆ ಮನೆಯವನಾಗಿದ್ದು , ಬಾಲಕಿಯನ್ನು ಕಿಡ್ನಾಪ್ ಮಾಡಿ ಲೈಂಗಿಕ ದೌರ್ಜನ್ಯ ಮಾಡಿರುವ ಬಗ್ಗೆ ಸಾಕ್ಷ್ಯಗಳು ಪೊಲೀಸರಿಗೆ ಲಭ್ಯವಾಗಿದೆ.