ಉಡುಪಿ, ಅ 22 (DaijiworldNews/HR): ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಬಳಿ ಬಾಕಿ ಇರುವ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದು, ಏಕಮುಖ ಸಂಚಾರಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಟ್ಟಿದ್ದು, ಸಂಚಾರ ನಿಯಂತ್ರಣಕ್ಕೆ ಸಂಚಾರಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಇಂದು ಸಂಜೆ ಧಾರಾಕಾರ ಮಳೆಯಾಗಿದ್ದು, ಮಳೆನೀರು ತುಂಬಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕು ಉಂಟಾದಾಗ ಮಳೆ ನಡುವೆ ಪೋಲಿಸ್ ಸಿಬ್ಬಂದಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ.
ಮಳೆ ನೀರಿನಲ್ಲಿ ಸ್ಕೂಟಿ ಸವಾರೆ ಸಿಲುಕಿದ್ದು, ತಕ್ಷಣ ಮಳೆಯನ್ನೂ ಲೆಕ್ಕಿಸದೇ ಸ್ಕೂಟಿಯನ್ನು ಸುರಕ್ಷಿತ ರಸ್ತೆಗೆ ತಂದು ಪೊಲೀಸ್ ಸಿಬ್ಬಂದಿ ನಿಲ್ಲಿಸಿದ್ದು, ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.