ಮಂಗಳೂರು, ಅ 22 (DaijiworldNews/HR): ತನ್ನ ಮಗ ಗೂಂಡಾಗಳ ಸಹಾಯದಿಂದ ಜೆಸಿಬಿ ಬಳಸಿ ಮನೆ ಕೆಡವಿ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ವೃದ್ಧೆಯೊಬ್ಬರು ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬರ್ಕೆ ಪೊಲೀಸ್ ಠಾಣೆ
ಸುನೀತಾ ಜನಾರ್ದನ್ (75) ದೂರುದಾರರಾಗಿದ್ದು, ಅವರು ತಮ್ಮ ಮಗ ದೀಪಕ್ ಸನಿಲ್ ಜೊತೆ ವಾಸಿಸುತ್ತಿದ್ದರು. ಅಕ್ಟೋಬರ್ 16 ರಂದು ಅವರ ಮನೆಯಲ್ಲಿ ಅಡುಗೆ ಮನೆ ಮತ್ತು ಶೌಚಾಲಯ ನವೀಕರಣ ಕೆಲಸ ನಡೆಯುತ್ತಿದ್ದರಿಂದ ಸುನೀತಾ ಮತ್ತು ಅವರ ಮಗ ದೀಪಕ್ ಇಬ್ಬರೂ ರಾತ್ರಿ ವಿಶ್ರಾಂತಿಗಾಗಿ ಮಗಳು ಸರಿತಾ ಅವರ ಮನೆಗೆ ಹೋಗಿದ್ದರು. ಇದೇ ವೇಳೆ ದೂರುದಾರರಾದ ಸುನೀತಾ ಅವರ ಮತ್ತೋರ್ವ ಪುತ್ರ ಸುದೇಶ್ ಸನಿಲ್ ಅವರು ಅಗೆಯುವ ಯಂತ್ರವನ್ನು ತಂದು ಇಡೀ ಮನೆಯನ್ನು ಕೆಡವಿದ್ದಾರೆ. ಕಬೋರ್ಡ್ ನಲ್ಲಿಟ್ಟಿದ್ದ 27 ಸಾವಿರ ನಗದು, 24 ಗ್ರಾಂ ತೂಕದ ಎರಡು ಚಿನ್ನದ ಬಳೆಗಳು ಮತ್ತು ಎಂಟು ಗ್ರಾಂ ತೂಕದ ಚಿನ್ನದ ಸರವನ್ನೂ ತೆಗೆದುಕೊಂಡು ಹೋಗಿದ್ದು, ಈ ವೇಳೆ ಮನೆಯಲ್ಲಿದ್ದ ಎಲ್ಲಾ ಸಾಮಾಗ್ರಿಗಳಿಗೆ ಹಾನಿ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಇನ್ನು ನನ್ನ ಮಗ ದೀಪಕ್ ಮತ್ತು ಮಗಳು ಸರಿತಾಗೆ ಕೂಡ ಜೀವ ಬೆದರಿಕೆ ಹಾಕಿದ್ದಾನೆ ಎಂದು ಸುನೀತಾ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬರ್ಕೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.