ಬಂಟ್ವಾಳ ಅ 22(DaijiworldNews/MS): ಬೆಂಗಳೂರಿಗೆ ಹೊರಟಿದ್ದ ಉಪನ್ಯಾಸಕಿಯೊಬ್ಬರು ತಾವು ತೆರಳಬೇಕಿದ್ದ ರೈಲನ್ನು ಬಿಟ್ಟು ಅದೇ ರೈಲಿನಲ್ಲಿ ತೆರಳಲು ಬಂದು ಅಸ್ವಸ್ಥಗೊಂಡು ಬಿದ್ದ ಪ್ರಯಾಣಿಕರೊಬ್ಬರ ಪ್ರಾಣ ಉಳಿಸಿದ ಘಟನೆ ಬಂಟ್ವಾಳ ನಿಲ್ದಾಣದಲ್ಲಿ ನಡೆದಿದೆ.
ಅತ್ತ ರೈಲು ಬರುತ್ತಿದ್ದಂತೆಯೇ ಇನ್ನೇನು ಬ್ಯಾಗ್ ಗಳನ್ನು ಹೊತ್ತು ರೈಲು ಏರಬೇಕು ಅನ್ನುವಷ್ಟರಲ್ಲಿ , ಹಿಂದಿದ್ದ ಪ್ರಯಾಣಿಕರೊಬ್ಬರು ಬಿದ್ದುಬಿಟ್ಟಿದ್ದಾರೆ. ತಕ್ಷಣ ಉಪನ್ಯಾಸಕಿ ಬಿದ್ಧ ಆ ವ್ಯಕ್ತಿಗೆ ಉಪಚಾರ ನೀಡಿ, ಆಸ್ಪತ್ರೆಗೆ ಸಾಗಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕಳುಹಿಸಿಕೊಡುತ್ತಾರೆ . ಹೀಗಾಗಿ ತಾವು ಪ್ರಯಾಣಿಸಬೇಕಾಗಿದ್ದ ರೈಲು ತಪ್ಪಿ ಹೋಗಿದೆ.
ಇದು ನೆಲ್ಯಾಡಿಯ ಉಪನ್ಯಾಸಕಿ ವ್ಯಕ್ತಿಯೊಬ್ಬರು ಬಂಟ್ವಾಳ ಬಿ.ಸಿ.ರೋಡಿನ ರೈಲ್ವೇ ನಿಲ್ದಾಣದಲ್ಲಿ ಹೃದಯವಂತಿಕೆ ಮೆರೆದು ವ್ಯಕ್ತಿಯೊಬ್ಬರ ಪ್ರಾಣ ಉಳಿಸಿದ ಕತೆ.
ನೆಲ್ಯಾಡಿಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿರುವ ಹೇಮಾವತಿ ಸೆ.28ರಂದು ಬಂಟ್ವಾಳದಿಂದ ಬೆಂಗಳೂರಿಗೆ ಹೋಗಲು ರೈಲ್ವೆ ನಿಲ್ದಾಣದಲ್ಲಿ ಕಾದು ಕುಳಿತಿದ್ದರು. ರೈಲುಬಂತು ಅತ್ತ ಹೋಗಬೇಕು ಎನ್ನುವಷ್ಟರಲ್ಲಿ ಎಲ್ಲವೂ ನಡೆದು ಹೋಗಿತ್ತು.."ಆ ವ್ಯಕ್ತಿ ಬೆವರುತ್ತಿದ್ದರು. ಮೈ ತಣ್ಣಗಿತ್ತು. ಆಂಬ್ಯುಲೆನ್ಸ್ಗೆ ಕರೆ ಮಾಡಲು ಪ್ರಯತ್ನಿಸಿದರು. ಆ ಸಂದರ್ಭ ರೈಲು ಹೊರಟು ಹೋಯಿತು. ಸುತ್ತಲೂ ಯಾರೂ ಇರಲಿಲ್ಲ. ತಕ್ಷಣ ಆಟೋ ರಿಕ್ಷಾ ಹಿಡಿದು ಬಿ.ಸಿ ರೋಡಿನ ಸೋಮಯಾಜಿ ಆಸ್ಪತ್ರೆಗೆ ಹೋದೆ. ಅವರು ಚೇತರಿಸಿಕೊಂಡರು. ಅಲ್ಲಿಂದ ಆ ವ್ಯಕ್ತಿ ಸಂಬಂಧಿಕರ ಸಂಖ್ಯೆಯನ್ನು ನೀಡಿದರು. ಸಂಬಂಧಿಕರು ಬಂದ ಬಳಿಕ ಕೂಡಲೇ ಅವರನ್ನು ಕೆಎಂಸಿ ಮಂಗಳೂರಿಗೆ ಕರೆದೊಯ್ಯಲಾಯಿತು. ನಾನು ಮರುದಿನ ಬಸ್ನಲ್ಲಿ ಬೆಂಗಳೂರಿಗೆ ಹೊರಟೆ" ಎಂದು ಹೇಮಾವತಿ ನಡೆದ ಘಟನೆ ವಿವರಿಸುತ್ತಾರೆ.
"ಹೇಮಾವತಿ ಇಲ್ಲದಿದ್ದರೆ ನಾನು ಬದುಕುತ್ತಿರಲಿಲ್ಲ. ನಾನು ಕುಸಿದು ಬಿದ್ದಾಗ ಏನಾಗುತ್ತಿದೆ ಎಂದು ನನಗೆ ತಿಳಿದಿತ್ತು. ಆದರೆ, ಮಾತನಾಡಲು ಸಾಧ್ಯವಾಗಲಿಲ್ಲ. ಡಾ.ಪದ್ಮನಾಭ ಕಾಮತ್ ಅವರನ್ನು ಸಂಪರ್ಕಿಸಿದ ಬಳಿಕ ಅವರ ವೈದ್ಯ ತಂಡ ನನಗೆ ಮರುಜೀವ ನೀಡಿತು" ಎನ್ನುತ್ತಾರೆ ವಿದೇಶದಲ್ಲಿ ಉದ್ಯಮಿಯಾಗಿದ್ದ ಕುಸಿದು ಬಿದ್ದ ವ್ಯಕ್ತಿ.
ಅ.17 ರಂದು ಹೇಮಾವತಿ ಅವರು ತಮ್ಮ ತಾಯಿಯೊಂದಿಗೆ ಕೆಎಂಸಿ ಗೆ ಬಂದಿದ್ದ ವೇಳೆ ಡಾ. ಕಾಮತ್ ಅವರಿಗೆ ಪ್ರಾಣಾಪಾಯದಿಂದ ಪಾರಾದ ಉದ್ಯಮಿಯವರು, ತನ್ನನ್ನು ರಕ್ಷಿಸಿದ ಹೇಮಾವತಿಯವರನ್ನು ಪರಿಚಯಿಸಿದರು. ಮೊದಲೇ ಘಟನೆ ಬಗ್ಗೆ ತಿಳಿದುಕೊಂಡಿದ್ದ ಡಾ.ಕಾಮತ್ ಅವರು, ಹೇಮಾವತಿ ಯವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿದ್ದಾರೆ