ಕುಂದಾಪುರ, ಅ 21(DaijiworldNews/MS): ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯುತ್ತಿದ್ದಾಗ, ಬೆಂಗಾವಲು ಪೊಲೀಸರನ್ನು ತಳ್ಳಿ ಆರೋಪಿಯೋರ್ವ ಪರಾರಿಯಾದ ಘಟನೆ ಅ . 20 ರಂದು ವರದಿಯಾಗಿದೆ.
ಭಟ್ಕಳ ಮೂಲದ ಮೊಹಮ್ಮದ್ ರಾಹೀಕ್ (22) ಪರಾರಿಯಾದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಬೈಲ್ ಅಂಗಡಿಯಲ್ಲಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದರು. ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ವಿಧಿಸಿದ್ದರಿಂದ ಕುಂದಾಪುರದಿಂದ ಹೊರಟು ಜಿಲ್ಲಾ ಕಾರಾಗೃಹ ಕಾಜರಗುತ್ತು ಮುಖ್ಯ ದ್ವಾರದ ಬಳಿ ತಲುಪಿ ವಾಹನ ನಿಲ್ಲಿಸಿ ಆರೋಪಿಯನ್ನು ಇಳಿಸುತ್ತಿದ್ದಂತೆ ಅರೋಪಿ ಭದ್ರತೆಯಲ್ಲಿದ್ದ ಪೊಲೀಸರನ್ನು ತಳ್ಳಿ ಹಾಕಿ ಹೊಟ್ಟೆಗೆ ಹೊಡೆದು ದೂಡಿ ಹಾಕಿ ಕಾಡಿನ ಕಡೆ ಓಡಿ ಹೋಗಿ ತಪ್ಪಿಸಿಕೊಂಡಿದ್ದಾನೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .