ಕಾರ್ಕಳ, ಅ 20 (DaijiworldNews/SM): ಸಾಣುರು ಗ್ರಾಮದ ಶುಂಠಿಗುಡ್ಡೆ ಎಂಬಲ್ಲಿನ ರಬ್ಬರ್ ಪ್ಲಾಂಟೇಶನ್ ಸನ್ನಿಹದಲ್ಲಿ ಸುಟ್ಟಸ್ಥಿತಿಯಲ್ಲಿ ಕಾರ್ಮಿಕರೋರ್ವರ ಶವ ಪತ್ತೆಯಾಗಿದೆ. ಕೇರಳ ಮೂಲದ ಮಲಪ್ಪುರ ಜಿಲ್ಲೆಯ ಗೋಪಿ(60) ಎಂಬವರ ಮೃತದೇಹ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ರಬ್ಬರ್ ತೋಟದಲ್ಲಿ ಕಾರ್ಮಿಕನಾಗಿ ದುಡಿಯುತ್ತಿರೆಂಬ ಮಾಹಿತಿ ಲಭಿಸಿದೆ. ಕಳೆದ ಒಂದು ವಾರದ ಹಿಂದೆ ಅದೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ಬಾಹುಲೇಯನ್ ಎಂಬವರೊಂದಿಗೆ ಊರಿಗೆ ಹೋಗಿ ಹಿಂತಿರುಗಿದ್ದರು.
ಅಕ್ಟೋಬರ್ 19ರಂದು ಬೆಳಿಗ್ಗೆ 9 ಗಂಟೆಗೆ ವಸಂತ ಎಂಬವರು ಗ್ರಾಸ್ ಕಟ್ಟಿಂಗ್ಗೆಂದು ಆ ತೋಟದ ದ್ವಾರದ ಬಳಿಗೆ ಬಂದಿದ್ದಾಗ ಗೇಟ್ ಒಳಗಿನಿಂದ ಬೀಗ ಹಾಕಲಾಗಿದ್ದು, ಕೂಗಿ ಕರೆದರೆ ಕೆಲಸದವರು ಬಂದಿರುವುದಿಲ್ಲ. ಗೇಟ್ನ ಮುಂದೆ ಸ್ವಲ್ಪ ದೂರದಲ್ಲಿ ದಾರಿಯ ಬದಿಯಲ್ಲಿ ಸುಟ್ಟ ಕರಕಲಾದ ಮೃತದೇಹವೊಂದು ಕಾಣಸಿಕ್ಕಿದೆ. ಅದರ ಪಕ್ಕದಲ್ಲಿ ಲೈಟರ್ ಹಾಗೂ ಪೆಟ್ರೋಲ್ ಕ್ಯಾನಿನ ಮುಚ್ಚಳ ಕಂಡುಬಂದಿರುತ್ತದೆ ಎಂದು ಕಾಬೆಟ್ಟು ಹವಾಲ್ದಾರ್ಬೆಟ್ಟುವಿನ ದಿಲೀಪ್ ಎಂಬವರ ಗಮನಕ್ಕೆ ತಂದಿದ್ದರು.
ದಿಲೀಪ್ ಹಾಗೂ ವಿವೇಕಾನಂದ ಶೆಣೈ ಎಂಬವರು ಗೇರುಬೀಜ ಕಾರ್ಖಾನೆಯ ಪಾಲುದಾರರಾಗಿದ್ದಾರೆ. ವಿವೇಕಾನಂದ ಶೆಣೈಯವರು ಸಾಣೂರು ಶುಂಠಿಗುಡ್ಡೆಯ ಎಂಬಲ್ಲಿ ಕೇರಳದ ಬಿಜು ಥೋಮಸ್ ಎಂಬುವವರ ಜೊತೆ ಕರಾರು ಮೂಲಕ ರಬ್ಬರ್ ಪ್ಲಾಂಟೇಶನ್ ಪಡೆದುಕೊಂಡು ವ್ಯವಹಾರ ಮಾಡಿಕೊಂಡಿರುತ್ತಾರೆ. ಪ್ಲಾಂಟೇಶನ್ನ ಉಸ್ತುವಾರಿಯನ್ನು ಪಿರ್ಯಾದಿದಾರ ದಿಲೀಪ್ ನೋಡಿಕೊಳ್ಳುತ್ತಿದ್ದಾರೆ. ಇದೇ ಕಾರಣದಿಂದ ಈ ವಿಚಾರ ವಸಂತ ಅವರು ದಿಲೀಪ್ ಅವರ ಗಮನಕ್ಕೆ ತಂದಿರಲು ಕಾರಣವೆನ್ನಲಾಗಿದೆ.
ಗೋಪಿಯು ಯಾವುದೋ ಕಾರಣದಿಂದ ಬೆಂಕಿಯಿಂದ ಸುಟ್ಟು ಮೃತಪಟ್ಟಿರುತ್ತಾರೆ. ಜೊತೆಯಲ್ಲಿದ್ದ ಬಾಹುಲೇಯನ್ ಎಂಬಾತ ಕಾಣೆಯಾಗಿರುವುದರಿಂದ ಗೋಪಿಯ ಸಾವಿನ ಬಗ್ಗೆ ಸಂಶಯಕ್ಕೆ ಎಡೆಮಾಡಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.