ಉಡುಪಿ, ಅ 20 (DaijiworldNews/DB): ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂತರ್ಗತ ಆಹಾರ ಸುರಕ್ಷೆ ಮತ್ತು ಗುಣಮಟ್ಟದ ಪ್ರಾಧಿಕಾರ ಹಾಗೂ ಪ್ರತಿಯೊಂದು ರಾಜ್ಯದಲ್ಲಿ ಸ್ವತಂತ್ರ ಆಹಾರ ಮತ್ತು ಔಷಧಿ ಆಡಳಿತ ವಿಭಾಗ ಅಸ್ತಿತ್ವದಲ್ಲಿರುವಾಗ ಇದನ್ನು ಮುಸಲ್ಮಾನ ಸಂಘಟನೆಗಳಿಂದ ನೀಡಲಾಗುತ್ತಿದೆ. ಜಾತ್ಯತೀತ ಭಾರತದಲ್ಲಿ ಧಾರ್ಮಿಕ ಆಧಾರದಲ್ಲಿ ಸರ್ಟಿಫಿಕೇಶನ್ ಇದು ಕಾನೂನುಬಾಹಿರವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕ ವಿಜಯ ಕುಮಾರ್ ಹೇಳಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಡೆದ ಹಲಾಲ್ ವಿರೋಧಿ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಿಂದೂಗಳಿಗೆ ಒತ್ತಾಯಪೂರ್ವಕವಾಗಿ ಹಲಾಲ್ ವಸ್ತುಗಳನ್ನು ನೀಡಬಾರದು. ಹಿಂದೂ ಸಮಾಜಕ್ಕಾಗಿ ಹಲಾಲ್ ಮುಕ್ತ ವಸ್ತುಗಳನ್ನು ಒದಗಿಸಿಕೊಡಬೇಕು. ಹಾಗೂ ಹಲಾಲ್ ಪ್ರಮಾಣ ಪತ್ರವನ್ನು ನಿಷೇಧಿಸಬೇಕು. ಹಿಂದೂ ಸಮಾಜವನ್ನು ಹಲಾಲ್ ಮುಕ್ತರನ್ನಾಗಿಸಬೇಕೆನ್ನುವ ಬೇಡಿಕೆಯ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಅಪರ ಜಿಲ್ಲಾಧಿಕಾರಿಗಳ ಮೂಲಕಈ ವೇಳೆ ಸಲ್ಲಿಸಲಾಯಿತು.
ಶ್ರೀಧರ ಆಚಾರ್ಯ, ಹರಿಪ್ರಸಾದ್, ರಮಾನಂದ ಛಾತ್ರ, ಶ್ರೀನಿವಾಸ, ವಿಶ್ವನಾಥ ಉಪಸ್ಥಿತರಿದ್ದರು.