ಕಾರ್ಕಳ, ಅ 19(DaijiworldNews/MS): ನಗರದ ಹಿರಿಯಂಗಡಿ ಶ್ರೀ ದುಗಾಪರಮೇಶ್ವರಿ ದೇವಸ್ಥಾನ ವಠಾರದ ಹಿತ್ತಲಿನ ಬಾವಿಗೆ ಬಿದ್ದ ನವಿಲನ್ನು ಉರಗಪ್ರಿಯ ಅನಿಲ್ಪ್ರಭು ರಕ್ಷಿಸಿದ್ದಾರೆ.
ವಿಜಯಅಜ್ರಿ ಎಂಬವರ ಜಾಗದಲ್ಲಿ ಇದ್ದ ಬಾವಿಯೊಳಗೆ ನವಿಲು ಬಿದ್ದು ನೀರಿನಲ್ಲಿ ಚಡಪಡಿಸುತ್ತಿದ್ದ ವಿಚಾರವು ಬುಧವಾರ ಬೆಳಿಗ್ಗೆ ಸುಮಾರು11ರ ವೇಳೆಗೆ ಸ್ಥಳೀಯರೊಬ್ಬರ ಗಮಕ್ಕೆ ಬಂದಿತ್ತು. ಅರಣ್ಯ ಇಲಾಖೆಗೆ ಈ ಕುರಿತು ಮಾಹಿತಿಯನ್ನು ರವಾಯಿಸಲಾಗಿತ್ತು.
ಉರಗಪ್ರೇಮಿ ಅನಿಲ್ ಪ್ರಭು ಘಟನಾ ಸ್ಥಳಕ್ಕೆ ಅಗಮಿಸಿದ್ದರು. ಸುಮಾರು 20 ಅಡಿ ಅಳದ ನೀರಿನ ಬಾವಿಯೊಳಗಿನಿಂದ ಹೆಣ್ಣು ನವಿಲನ್ನು ಹೊರ ತೆಗೆದಿದ್ದಾರೆ. ಸುಮಾರು ಐದು ಕೆ.ಜಿ ಭಾರಯುಳ್ಳ ಆ ನವೀಲಿಗೆ ಗಾಯಗಳು ಉಂಟಾಗಿತ್ತೆಂದು ತಿಳಿದುಬಂದಿದೆ. ಮಂಗಳವಾರ ರಾತ್ರಿ ಸಮಯದಲ್ಲಿ ಆಯ ತಪ್ಪಿ ಬಾವಿಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಕಾರ್ಕಳ ಅರಣ್ಯ ಇಲಾಕಾಧಿಕಾರಿ ಕಚೇರಿಗೆ ತಪ್ಪೊಪ್ಪಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕಾರ್ಕಳದ ಆನೆಕೆರೆಯಲ್ಲಿ ನವಿಲು ಬಿದ್ದುಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯರು ಸ್ಥಳೀಯ ನಾಗರಿಕರ ಸಹಕಾರದೊಂದಿಗೆ ನವೀಲನ್ನು ಸಂರಕ್ಷಿಸಿದ್ದರು.