ಕಾರ್ಕಳ, ಅ 19 (DaijiworldNews/HR): ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಅವರು ಕಾರ್ಕಳ ತಾಲೂಕು ಕಚೇರಿಗೆ ಭೇಟಿ ಕಡತಗಳ ಪ್ರಗತಿ ಪರಿಶೀಲನೆ ನಡೆಸಿದರು.
ರಾಜ್ಯ ಸರಕಾರದ ಆದೇಶದಂತೆ ಜಿಲ್ಲಾಧಿಕಾರಿ ಅವರು ಕಾರ್ಕಳ ತಾಲೂಕು ಕಚೇರಿಗೆ ಅಗಮಿಸಿದ್ದು, ಅರ್ಜಿದಾರರೊಂದಿಗೆ ಸಂಯಮದಿಂದ ವರ್ತಿಸುವುದು. ಸಕಾಲದಂತೆ ಅರ್ಜಿಗಳನ್ನು ವಿಲೇವಾರಿ ಮಾಡುವುದು, ಸಮಯ ಪರಿಪಾಲನೆ-ಶಿಸ್ತು-ಕರ್ತವ್ಯ ನಿಷ್ಠೆ-ಭ್ರಷ್ಟಾಚಾರ ರಹಿತ ಕಾರ್ಯ ಪಾಲನೆ ಮಾಡುವುದರ ಜೊತೆಗೆ ಸ್ವಚ್ಚತೆಯ ಕಡೆಯೂ ಗಮನ ಹರಿಸಿಕೊಳ್ಳುವಂತೆ ಇದೇ ಸಂದರ್ಭದಲ್ಲಿ ನಿರ್ದೇಶನ ನೀಡಿದ ಜಿಲ್ಲಾಧಿಕಾರಿ ಕೂರ್ಮರಾವ್ ಅವರು ಕರ್ತವ್ಯ ನಿಷ್ಟೆ ಇನ್ನಷ್ಟು ಹೆಚ್ಚಿಸುವವಂತೆ ಸಲಹೆ ನೀಡಿ ಕಚೇರಿಯ ಕಾರ್ಯ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತಹಶೀಲ್ದಾರ್ ಪ್ರದೀಪ್ ಕುರ್ವೇಕರ್ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ಶಿವಪ್ರಸಾದ್ ಉಪಸ್ಥಿತರಿದ್ದರು.