ಬಂಟ್ವಾಳ, ಅ 18 (DaijiworldNews/HR): ರಾಜ್ಯ ಸರ್ಕಾರ ಗ್ರಾಮ ಪಂಚಾಯತ್ ಪ್ರತಿನಿಧಿಗಳ ಹಕ್ಕು ಮೊಟಕುಗೊಳಿಸಿ ವಿಕೇಂದ್ರಿಕರಣ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಧೋರಣೆಯನ್ನು ಎಂದು ಆರೋಪಿಸಿ ಮಂಗಳವಾರ ಮಾಜಿ ಸಚಿವ ಬಿ.ರಮಾನಾಥ ರೈ ಅವರ ಮುಂದಾಳತ್ವದಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ, ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ವತಿಯಿಂದ ಆಯೋಜಿಸಲಾದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಬಿಜೆಪಿಯವರಿಗೆ ಪಂಚಾಯತ್ ರಾಜ್ ವ್ಯವಸ್ಥೆಯ ಮೇಲೆ ವಿಶ್ವಾಸ ಇಲ್ಲ, ಹೀಗಾಗಿ ಅವರು ಅವಧಿ ಮುಗಿದು ಹಲವು ಸಮಯವಾದರೂ ತಾ.ಪಂ.ಜಿ.ಪಂ.ಚುನಾವಣೆ ನಡೆಸಲು ಮುಂದಾಗಿಲ್ಲ, 40/ ಕಮೀಷನ್ ಪಡೆದು ಅರ್ಹತೆ ಇಲ್ಲದವರಿಗೆ ಕಾಮಗಾರಿ ನೀಡಿದ್ದು, ಕಳಪೆ ಗುಣಮಟ್ಟದ ಕಾಮಗಾರಿ ನಡೆಯುತ್ತಿದೆ. ಅಲ್ಪಸಂಖ್ಯಾತ, ದಲಿತ ಸಮುದಾಯದ 70 ಪರ್ಸೆಂಟ್ ಅನುದಾನಗಳನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಪಂಚಾಯತ್ ವಿಕೇಂದ್ರೀಕರಣ ದ ಮೂಲಕ ನೇರ ಪಂಚಾಯತ್ ಗೆ ಹಣ ಬರುವಂತೆ ಮಾಡಿದ್ದು ಕಾಂಗ್ರೇಸ್ ಸರಕಾರ ಪಂಚಾಯತ್ ರಾಜ್ ವ್ಯವಸ್ಥೆ ಮೂಲಕ ಪರಿಣಾಮಕಾರಿ ಯಾಗಿ ಸರ್ವರಿಗೂ ಅಧಿಕಾರ ನೀಡುವ ಕೆಲಸ ಕಾಂಗ್ರೇಸ್ ಮಾಡಿದೆ ಎಂದು ಹೇಳಿದರು.
ರಾಜೀವ್ ಗಾಂಧಿಯವರ ಕನಸಿನ ಕೂಸು ವಿಕೇಂದ್ರೀಕರಣವಾಗಿದ್ದು, ಈ ಕಾರ್ಯವನ್ನು ಕಾಂಗ್ರೇಸ್ ಮಾಡಿದ್ದರ ಹಿನ್ನೆಲೆಯಲ್ಲಿ ಗ್ರಾಮಗಳ ಅಭಿವೃದ್ಧಿಗೆ ಕಾರಣವಾಯಿತು ಎಂದು ಅವರು ಹೇಳಿದರು. ಅಧಿಕಾರ ವಿಕೇಂದ್ರೀಕರಣದ ಮೂಲಕ ಎಲ್ಲಾ ವರ್ಗದ ಜನರಿಗೆ ಅಧಿಕಾರ ಸಿಗಬೇಕು ಎಂಬ ಕನಸು ಇದ್ದರೆ ಅದು ಕಾಂಗ್ರೇಸ್ ಕೊಡುಗೆ, ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ ಮಾದರಿಯಾಗಿದೆ ಈ ರೀತಿಯಲ್ಲಿ ಸರ್ವರಿಗೂ ಸಮಾನ ರೀತಿಯ ಹತ್ತು ಹಲವು ಜನಪರ ಯೋಜನೆಗಳನ್ನು ಕಾಂಗ್ರೇಸ್ ಅಧಿಕಾರದ ಅವಧಿಯಲ್ಲಿ ಜಾರಿ ಮಾಡಿದೆ .
1912 ಇಸವಿ ಯಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಬ್ಯಾಂಕ್ ಗೆ ನೇರ ಹಣ ವರ್ಗಾವಣೆ ಮಾಡಿದ ಯೋಜನೆಯನ್ನು, ಬಿಜೆಪಿಯವರು ನಾವು ಮಾಡಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಈ ಬಗ್ಗೆ ಬಹಿರಂಗ ಚರ್ಚೆ ಮಾಡಲು ನಾನು ಸದಾ ಸಿದ್ದ ಎಂದು ಸವಾಲು ಹಾಕಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ಯ ವ್ಯವಸ್ಥೆ ಯ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಅವರು ಮಾತನಾಡಿ, ಗ್ರಾಮ ಪಂಚಾಯತ್ ಗೆ, ಪಂಚಾಯತ್ ಸದಸ್ಯರಿಗೆ ಹಾಗೂ ಸದಸ್ಯರಿಗೆ ವಿಶೇಷ ವಾದ ಅಧಿಕಾರವನ್ನು ಸ್ವಾತಂತ್ರ್ಯ ಬಳಿಕ ಅಧಿಕಾರ ನೀಡಲಾಗಿತ್ತು.ಆದರೆ ಈಗ ಬಂದಿರುವ ಬಿಜೆಪಿ ಸರಕಾರ ಗ್ರಾಮ ಪಂಚಾಯತ್ ಸದಸ್ಯರ ಅಧಿಕಾರ ವನ್ನು ದುರ್ಬಲ ಗೊಳಿಸಿ, ಅಧಿಕಾರ ವನ್ನು ಮೊಟಕುಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.ಗೌರವದ ಸ್ವಾಭಿಮಾನದ ಹೋರಾಟ ವೇ ಹೊರತು ಪಕ್ಷದ ಅಸ್ತಿತ್ವಕ್ಕೆಗಾಗಿ ಹೋರಾಟದ ಅಗತ್ಯ ಪಕ್ಷಕ್ಕಿಲ್ಲ ಎಂದು ಅವರು ಹೇಳಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪದ್ಮಶೇಖರ್ ಜೈನ್, ಎಂ.ಎಸ್.ಮಹಮ್ಮದ್, ಪದ್ಮನಾಭ ರೈ, ತಾ.ಪಂ.ಮಾಜಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಸಂಪತ್ ಕುಮಾರ್ ಶೆಟ್ಟಿ, ಸುದರ್ಶನ್ ಜೈನ್, ಮಾಯಿಲಪ್ಪ ಸಾಲ್ಯಾನ್, ಐಡಾಸುರೇಶ್, ಜಯಂತಿ ಪೂಜಾರಿ, ಜೆಸಿಂತಾ ಡಿ.ಸೋಜ, ಕಾಂಚಲಾಕ್ಷಿ , ನವಾಜ್ ಬಡಕಬೈಲು, ಶೋಬಿತ್ ಪೂಂಜಾ, ವೆಂಕಪ್ಪ ಪೂಜಾರಿ, ನಸೀಮಾ ಬೇಗಂ, ಸದಾಶಿವ ಬಂಗೇರ, ಜಗದೀಶ್ ಕೊಯಿಲ, ಸಂದೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು.