ಮಂಗಳೂರು, ಅ 17 (DaijiworldNews/SM): ದೇಶದ ಸಾರ್ವಜನಿಕ ಕ್ಷೇತ್ರದ 5ನೇ ಅತಿ ದೊಡ್ಡ ಬ್ಯಾಂಕ್ ಆಗಿರುವ ಯೂನಿಯನ್ ಬ್ಯಾಂಕ್ ಇಂಡಿಯಾವು ಯೂ-ಜೀನಿಯಸ್ ಎಂಬ ರಾಷ್ಟ್ರ ಮಟ್ಟದ ಸಾಮಾನ್ಯ ಜ್ಞಾನದ ರಸಪ್ರಶ್ನೆ ಸ್ಪರ್ಧೆಯನ್ನು ದೇಶಾದ್ಯಂತ ಆಯೋಜಿಸುತ್ತಿದೆ ಎಂದು ಆಯೋಜಕರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದ್ದಾರೆ.
ಈ ರಸಪ್ರಶ್ನೆ ಸ್ಪರ್ಧೆಯನ್ನು 8 ರಿಂದ 12ನೇ ತರಗತಿಯ ಪ್ರತಿಯೊಂದು ಶಾಲೆ/ ಪದವಿ ಪೂರ್ವ ಕಾಲೇಜುಗಳಲ್ಲಿ ಶಾಲಾ ಮಕ್ಕಳಿಗಾಗಿ ದೇಶಾದ್ಯಂತ ನಡೆಸಲಾಗುವುದು. ಎರಡೆರಡು ವಿದ್ಯಾರ್ಥಿಗಳ ಎರಡು ತಂಡಗಳನ್ನು ಸ್ಪರ್ಧೆಗೆ ನೋಂದಾಯಿಸಬಹುದು. ಈ ಸ್ಪರ್ಧೆಯನ್ನು ವಿವಿಧ ಹಂತಗಳಲ್ಲಿ ನಡೆಸಲಾಗುತ್ತಿದೆ. ಪೂರ್ವಭಾವಿ ಸುತ್ತಿನಲ್ಲಿ ವಿಜೇತರಾದವರು ನವೆಂಬರ್ ನಲ್ಲಿ ಮುಂಬೈಯಲ್ಲಿ ನಡೆಯುವ ಅಂತಿಮ ಸುತ್ತಿನಲ್ಲಿ ಭಾಗವಹಿಸುವ ಅವಕಾಶವನ್ನು ಪಡೆಯುತ್ತಾರೆ. ಪೂರ್ವಭಾವಿ ಸುತ್ತು ಅಕ್ಟೋಬರ್ 18 ರಂದು ಮಂಗಳೂರಿನ ಫೋರಂ ಫಿಜಾ ಮಾಲ್ ನ ಎದುರುಗಡ ಇರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಆವರಣದಲ್ಲಿ ನಡೆಸಲಾಗುವುದು. ಮಂಗಳೂರು, ಉಡುಪಿ, ಕೋಯಿಕೋಡ್ ಜಿಲ್ಲೆಯ ವಿವಿಧ ಶಾಲೆಗಳಿಂದ ಸುಮಾರು150 ತಂಡಗಳು 18ರಂದು ಮಂಗಳೂರಿನಲ್ಲಿ ನಡೆಯುವ ಪೂರ್ವಭಾವಿ ಸುತ್ತಿನಲ್ಲಿ ಭಾಗವಹಿಸುತ್ತಾರೆ. ಯೂಜೀನಿಯಸ್’ (U-Genius’) ಸ್ಪರ್ಧೆಯ ಪೂರ್ವಭಾವಿ ಸುತ್ತುಗಳು ದೇಶದ ಪ್ರಮುಖ ನಗರಗಳಲ್ಲಿ ನಡೆಯಲಿದೆ. ಪ್ರಥಮ ವಿಜೇತರಿಗೆ ಒಂದು ಲಕ್ಷದಷ್ಟು ಬಹುಮಾನ ನೀಡಲಾಗುತ್ತದೆ.