ಉಡುಪಿ, ಅ 17 (DaijiworldNews/SM): ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆ ಅವರಿಗೆ ಸವಾಲು ಹಾಕುವ ನೈತಿಕತೆ ಎಸ್ಡಿಪಿಐ ಜಿಲ್ಲಾಧ್ಯಕ್ಷರಿಗೆ ಇಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪ್ರಶಾಂತ್ ಜತ್ತನ್ನ ಹೇಳಿದ್ದಾರೆ.
ಕಾಪು ಪುರಸಭೆಯ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆಯ ರಾಜಕೀಯ ಮಾಡಿದ್ದು ಕ್ಷೇತ್ರದ ಜನತೆ ಮತ್ತು ಉಡುಪಿ ಜಿಲ್ಲೆಯ ಜನತೆ ಇನ್ನು ಮರೆತಿಲ್ಲ. ಬಿಜೆಪಿ ಮತ್ತು ಎಸ್ ಡಿ ಪಿ ಐ ಒಂದೇ ನಾಣ್ಯದ ಎರಡು ಮುಖಗಳು ಎಂದು ಕರಾವಳಿ ಭಾಗದ ಜನಸಾಮಾನ್ಯರಿಗೆ ಗೊತ್ತಾಗಿದೆ. ನಿಮ್ಮ ತಪ್ಪುಗಳನ್ನು ಮರೆಮಾಚಲು ಈ ರೀತಿ ಪತ್ರಿಕಾ ಹೇಳಿಕೆಯನ್ನು ಕೊಡುವುದನ್ನು ಬಿಟ್ಟು ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಜಾತ್ಯತೀತ ಪಕ್ಷಗಳಿಗೆ ಬೆಂಬಲ ಕೊಡುವ ಕೆಲಸ ಮಾಡಿ. ದೇಶಕ್ಕೆ ರಾಜ್ಯಕ್ಕೆ ನಿಮ್ಮ ಕೊಡುಗೆ ಏನು? ಎಂದು ವರು ಪ್ರಶ್ನೆ ಮಾಡಿದ್ದಾರೆ.