ಕಾಸರಗೋಡು, ಅ 17 (DaijiworldNews/SM): ಬಿ.ಎಸ್.ಎನ್.ಎಲ್ ನ ಕೇಬಲ್ ಕಳವುಗೈದ ಐವರು ಅಸ್ಸಾಂ ನಿವಾಸಿಗಳನ್ನು ಚಿಮೇನಿ ಪೊಲೀಸರು ಬಂಧಿಸಿದ್ದಾರೆ. ಇವರು ಕಳವುಗೈದ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಕೇಬಲ್ ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ರಸೂಲ್ ಹಸನ್, ಮಜಿದುಲ್ ಇಸ್ಲಾಂ, ಪೂಲ್ ಬಾರ್ ಅಲಿ, ಶರೀಫುಲ್, ಮುಹಮ್ಮದ್ ರೂಬಿ ಉಲ್ ಇಸ್ಲಾಂ ಬಂಧಿತ ಆರೋಪಿಗಳಾಗಿದ್ದಾರೆ. ವಾಹನ ತಪಾಸಣೆ ನಡೆಸುತ್ತಿದ್ದಾಗ ಪೊಲೀಸರನ್ನು ಕಂಡು ವಾಹನ ನಿಲ್ಲಿಸದೆ ಪರಾರಿಯಾಗಿದ್ದು, ಸಂಶಯಗೊಂಡು ಪೊಲೀಸರು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು ತಪಾಸಣೆ ನಡೆಸಿದಾಗ ಕೇಬಲ್ ಪತ್ತೆಯಾಗಿದೆ.
ಕಚ್ಚಾ ಸಾಮಾಗ್ರಿ ಹೆಕ್ಕುವ ನೆಪದಲ್ಲಿ ಬಂದಿದ್ದ ಇವರು ಕೇಬಲ್ ನ್ನು ಕಳವುಗೈದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.