ಕಾಸರಗೋಡು, ಅ 17 (DaijiworldNews/MS): ಈ ಬಸ್ಸಿನೊಳಗೆ ಹತ್ತಿ ಕುಳಿದರೆ ಚಾ, ಕಾಫಿ, ಜ್ಯೂಸ್ ಕುಡಿಯಬಹುದು. ಹಾಗೆಯೇ ಶಾಪಿಂಗ್ ಮಾಡಿ ದಣಿವಾರಿಸಿಕೊಳ್ಳಬಹುದು ಆದರೆ ಬಸ್ಸು ಮಾತ್ರ ಚಲಿಸದು. ಕೇರಳದ ಸಾರಿಗೆ ಸಂಸ್ಥೆಯ ಜತೆ ಮಿಲ್ಮಾ ಕೈ ಜೋಡಿಸಿ ಇಂಥ ಉದ್ಯಮಕ್ಕಿಳಿದಿದೆ.
ಹೌದು ಕೇರಳದ ಹಳೇ ಗುಜಿರಿ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಗಳ ನ್ನು ಈಗ ಮಿಲ್ಮಾ ಶಾಪಿಂಗ್ ಸೆಂಟರ್ ಗಳನ್ನಾಗಿ ಬದಲಾಗಿಸಲಾಗುತ್ತಿದೆ. ಪುಟ್ಟ ಶಾಫಿಂಗ್ ಸೆಂಟರ್ ನಲ್ಲಿ ಕೇರಳದ ಹಾಲುತ್ಪನ್ನ ಸಂಸ್ಥೆ ಮಿಲ್ಮಾದ 70ರಷ್ಟು ಬಗೆಯ ಉತ್ಪನ್ನ ಲಭ್ಯ ವಾಗಲಿದೆ
ಕಾಸರಗೋಡು ಪೇಟೆಯ ಕೆಪಿಆರ್ ರಾವ್ ರಸ್ತೆ ಯ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದ ಬದಿಯಲ್ಲಿ ಬಸ್ಸಂಗಡಿ ಗಮನ ಸೆಳೆಯುತ್ತಿದ್ದು , ಗ್ರಾಹಕರನ್ನು ಆಕರ್ಷಿಸುತ್ತಿದೆ. ಎಂಟು ಮಂದಿಗೆ ಕುಳಿತುಕೊಳ್ಳಲು ಕುರ್ಚಿ ಹಾಗೂ ಎರಡು ಮೇಜುಗಳು ಇದರಲ್ಲಿದೆ