ಮಂಗಳೂರು, ಅ 16 (DaijiworldNews/SM): ಸಚಿವ ನಿತಿನ್ ಗಡ್ಕರಿಯವರು ಅಧಿಕಾರಿಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಟೊಲ್ ಗೇಟ್ ತೆರವು ಸಂಬಂಧ ಅಧಿಕಾರಿಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಮುಂದಿನ 15 ದಿನಗಳಲ್ಲಿ ಸಮಸ್ಯೆ ಪರಿಹಾರಗೊಳ್ಳುವ ಭರವಸೆ ಇದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೊನೆಯ ಹಂತದ ಮೀಟಿಂಗ್ ನಡೆಯುತ್ತಿದೆ. ಎನ್ ಎಂಪಿಟಿ, ನವಯುಗ್ ಕಂಪೆನಿಗಳು ರಸ್ತೆ ನಿರ್ಮಾಣ ಮಾಡಿತ್ತು. ಟೋಲ್ ಗೇಟ್ ಯಾರಿಗೆ ಸೇರಿದ್ದು ಎನ್ನುವುದು ಸದ್ಯ ಇರುವಂತ ಚರ್ಚೆಯಾಗಿದೆ. ನಮಗಿರುವುದು ಟೋಲ್ ಗೇಟ್ ಸಮಸ್ಯೆಯಲ್ಲ ರಸ್ತೆ ನಿರ್ವಹಣೆ ಸಮಸ್ಯೆಯಾಗಿದೆ. ಕೆಲವು ಕಾನೂನಾತ್ಮಕ ತೊಡಕುಗಳು ಇವೆ.
ಅವುಗಳನ್ನು ಮೀರಿ ನಡೆಯಲು ಸರಕಾರಕ್ಕೆ ಅಸಾಧ್ಯವಾಗಿದೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಚರ್ಚೆಗಳು ನಡೆದಿದೆ. ರಸ್ತೆ ನಿರ್ವಹಣೆಯೊಂದೇ ಎದುರಾಗುವ ಪ್ರಮುಖ ಸಮಸ್ಯೆಯಾಗಿದೆ ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.