ಮಂಗಳೂರು, ಫೆ 15(SM): ಕಾಶ್ಮೀರದಲ್ಲಿ ಗುರುವಾರ ಪಾಕ್ ಉಗ್ರರು ನಡೆಸಿರುವ ರಾಕ್ಷಸ ಕೃತ್ಯವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಖಂಡಿಸಿದ್ದಾರೆ.
ನಮ್ಮ ದೇಶದ ಸೈನಿಕರ ಮೇಲೆ ನಡೆದಿರುವ ಉಗ್ರ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಇದೊಂದು ಅಮಾನವೀಯ ಹಾಗೂ ಹೇಯ ಕೃತ್ಯ ಎಂದಿದ್ದಾರೆ. ಈ ಉಗ್ರರ ಕೃತ್ಯಕ್ಕೆ ತೀರುಗೇಟು ನೀಡಬೇಕೆಂದ ಅವರು ಕೇಂದ್ರ ಸರಕಾರದ ಜೊತೆ ಈ ಸಂದರ್ಭದಲ್ಲಿ ನಾವಿದ್ದೇವೆ, ಮೃತ ಸೈನಿಕರ ಕುಟುಂಬಕ್ಕೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಸಚಿವರು ತಿಳಿಸಿದ್ದಾರೆ.
ಗುರುವಾರ ನಡೆದ ಉಗ್ರರ ದಾಳಿಯಲ್ಲಿ ೪೪ ಯೋಧರು ಹುತಾತ್ಮರಾಗಿದ್ದಾರೆ. ಹಾಗೂ ಹಲವು ಸೈನಿಕರು ಗಾಯಗೊಂಡಿದ್ದಾರೆ. ಉಗ್ರರ ಹೇಯ ಕೃತ್ಯದ ವಿರುದ್ದ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.