ಕಾರ್ಕಳ, ಅ 15 (DaijiworldNews/MS): ದೃಷ್ಠಿದೋಷದಿಂದ ಬಳಲುತ್ತಿದ್ದ ರಿಕ್ಷಾ ಚಾಲಕರೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಜೋಗುಲಬೆಟ್ಟು ಇಂದುಗುರಿಯಲ್ಲಿ ನಡೆದಿದೆ.
ಜೋಗುಲಬೆಟ್ಟು ಇಂದುಗುರಿಯ ಬ್ರೂನ ಸಲ್ದಾನ (57) ಘಟನೆಯಲ್ಲಿ ಬದುಕಿಗೆ ಅಂತ್ಯ ಹೇಳಿದವರು. ಆಟೋರಿಕ್ಷಾ ಇಟ್ಟುಕೊಂಡು ಬಾಡಿಗೆ ಮಾಡಿಕೊಂಡಿಕೊಂಡು ಜೀವನ ಸಾಗಿಸುತ್ತಿದ್ದರು. ಅಕ್ಟೋಬರ್ ೦೭ ರಂದು ಬ್ರೂನ ಸಲ್ದಾನ ರವರಿಗೆ ಕಣ್ಣು ಸರಿಯಾಗಿ ಕಾಣಿಸುವುದಿಲ್ಲ ಎಂದು ಚಿಕಿತ್ಸೆಗೆಂದು ಅವರು ಪತ್ನಿ ಸ್ಟೆಲ್ಲಾ ಸಲ್ದಾನ ನಿಟ್ಟೆ ಗಾಜರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.
ಅಲ್ಲಿನ ಆಸ್ಪತ್ರೆಯ ವೈದ್ಯರು ಪರೀಕ್ಷೆಗೆ ಒಳಪಡಿಸಿ ಕಣ್ಣು ಅಪರೇಷನ್ ಮಾಡಬೇಕು ಎಂದು ಸಲಹೆ ನೀಡಿದ್ದರು. ಇದರಿಂದ ನೊಂದಿದ್ದ ಬ್ರೂನ ಸಲ್ದಾನ ಮದ್ಯದೊಂದಿಗೆ ಯಾವುದೋ ವಿಷ ಸೇವನೆ ಮಾಡಿದ್ದರು. ಹೊಟ್ಟೆನೋವಿನೀಂದ ಬಳಲುತ್ತಿದ್ದ ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ಮಂಗಳೂರಿನ ಎ. ಜೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ.
ಬ್ರೂನ ಸಲ್ದಾನರವರು ಚಿಕಿತ್ಸೆಗೆ ಸ್ಪಂದಿಸದೇ ಅಕ್ಟೋಬರ್ ೧೫ರಂದು ಬೆಳಗಿನ ಜಾವ ೦೪:೪೨ ಗಂಟೆಗೆ ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.