ಮಂಗಳೂರು, ಅ 15 (DaijiworldNews/HR): ಬಟ್ಟೆ ಅಂಗಡಿಯೊಂದಕ್ಕೆ ಡ್ರೆಸ್ ಖರೀದಿಸಲು ಬಂದಿದ್ದ ಬುರ್ಖಾಧಾರಿ ಮಹಿಳೆಯೊಬ್ಬರು ಅಂಗಡಿಯಲ್ಲಿದ್ದ ಕೆಲವು ಬಟ್ಟೆಗಳನ್ನು ಕಳವು ಮಾಡಿರುವ ಘಟನೆ ಕಾವೂರಿನ ದುರ್ಗಾ ಪ್ರಸಾದ್ ಕಟ್ಟಡದಲ್ಲಿರುವ ಸಂಧ್ಯಾ ಟೆಕ್ಸ್ ಟೈಲ್ನಲ್ಲಿ ನಡೆದಿದ್ದು, ಕಳ್ಳತನವಾಗಿರುವ ಸಂಪೂರ್ಣ ದೃಶ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಂಗಡಿಯಲ್ಲಿದ್ದ ಸಿಬ್ಬಂದಿ ಇನ್ನೋರ್ವ ಗ್ರಾಹಕರ ಬಳಿಗೆ ಹೋದ ವೇಳೆ ಬುರ್ಖಾಧಾರಿ ಮಹಿಳೆ ಅಂಗಡಿಯಲ್ಲಿದ್ದ ಕೆಲವೊಂದು ಬಟ್ಟೆಗಳನ್ನು ತಾನು ಧರಿಸಿದ ಬಟ್ಟೆಯ ಒಳಗೆ ಬಚ್ಚಿಟ್ಟು ಸ್ಥಳದಿಂದ ಪರಾರಿಯಾಗಿದ್ದು, ಇಡೀ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಕುರಿತು ಅಂಗಡಿ ಮಾಲೀಕರು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೋಲಿಸರು ತನಿಖೆ ನಡೆಸುತ್ತಿದ್ದಾರೆ.