ಉಡುಪಿ, ಫೆ 15(MSP):ಆಸ್ಟ್ರೇಲಿಯ ಬ್ರಿಸ್ಬೇನ್ನಲ್ಲಿ ನಡೆದ ಮಿಸೆಸ್ ಸೌತ್ ಇಂಡಿಯ ಯೂನಿವರ್ಸಲ್ ಸ್ಪರ್ಧೆಯಲ್ಲಿ ಗೆಲವಿನ ಕಿರೀಟ ಮುಡಿಗೇರಿಸಿಕೊಳ್ಳುವ ಉಡುಪಿಯ ಮಹಿಳೆ ಮಿಸೆಸ್ ಯೂನಿವರ್ಸಲ್ಗೆ ಪ್ರವೇಶ ಪಡೆದಿದ್ದಾರೆ. ಉಡುಪಿ ತೆಂಕಪೇಟೆ ನಿವಾಸಿಗಳಾದ ಅರುಣ್ ಶೆಣೈ, ಅರ್ಚನ ಶೆಣೈ ದಂಪತಿಯ ಪುತ್ರಿ ಡಾ. ಪದ್ಮ ಗಡಿಯಾರ್ ಬ್ರಿಸ್ಬೇನ್ನಲ್ಲಿ 2018 ಅಕ್ಟೋಬರ್ ತಿಂಗಳಲ್ಲಿ ಯು.ಎಸ್ ಮೂಲದ ಸಂಸ್ಥೆ ಆಯೋಜಿಸಿದ ಜಾಗತಿಕ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸಸ್ ಸೌತ್ ಇಂಡಿಯ ಯೂನಿವರ್ಸಲ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ 35 ವರ್ಷದ ಡಾ.ಪದ್ಮ ಆಸ್ಟ್ರೇಲಿಯದಲ್ಲಿ ದಂತ ವೈದ್ಯೆಯಾಗಿ ಕಾರ್ಯನಿರ್ವಹಿಸುತಿದ್ದಾರೆ.
ಪತಿ ಡಾ.ಸನಯ್ ಗಡಿಯಾರ್ ವೈದ್ಯರಾಗಿದ್ದು, ಸಮಾ (7) ಮಗಳು, ಶಯನ್ (4) ಮಗ, ಇಬ್ಬರು ಮಕ್ಕಳೊಂದಿಗೆ ಆಸ್ಟ್ರೇಲಿಯದಲ್ಲಿ ನೆಲೆಸಿದ್ದಾರೆ. ಪ್ರಾಥಮಿಕ ಶಿಕ್ಷಣ ಇಂದ್ರಾಳಿ ಶಾಲೆಯಲ್ಲಿ, ಪಿಯುಸಿ ಎಂಜಿಎಂ ಕಾಲೇಜು, ದಂತ ವೈದ್ಯಕೀಯ ಶಿಕ್ಷಣವನ್ನು ಮಂಗಳೂರಿನ ಎನಪೋಯ ವಿಶ್ವವಿದ್ಯಾನಿಲಯದಲ್ಲಿ ಪಡೆದಿದ್ದಾರೆ. ಸಣ್ಣವಳಿಂದಲು ಸೌಂದರ್ಯ ಸ್ಪರ್ಧೆಗಳಂತ ಚುಟವಟಿಕೆಯಲ್ಲಿ ಭಾಗವಹಿಸಬೇಕು ಎಂಬ ಆಸೆ ಇತ್ತು. ಇತ್ತೀಚೆಗೆ ಬಯಕೆ ಈಡೇರಿದೆ. ನನ್ನ ಪತಿ ಸಾಕಷ್ಟು ಸಹಕಾರ, ಪ್ರೋತ್ಸಾಹ ನೀಡಿದ್ದಾರೆ. ಅಂತಿಮ ಸ್ಪರ್ಧೆಯಲ್ಲಿ ನಾನು ಸೇರಿ 10 ಮಂದಿ ಸ್ಪರ್ಧಿಗಳಿದ್ದೆವು. ಫೋಟೊಗ್ರಫಿ, ಕ್ವಿಜ್, ಕ್ಯಾಟ್ವಾಕ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕಿರೀಟ ಮುಡಿಗೇರಿಸಿಕೊಂಡೆ. ಬಳಿಕ ಸಾಕಷ್ಟು ಜಾಹಿರಾತು ಸಂಸ್ಥೆ, ಮಾಡೆಲಿಂಗ್ಗೆ ಆಫರ್ಗಳು ಬರುತ್ತಿದೆ. ಇನ್ನು ಯಾವುದೇ ಆಲೋಚನೆಗಳನ್ನು ಮಾಡಿಲ್ಲ. ಓದುವುದು ಮತ್ತು ಬರೆಯುವುದು, ಸಿನಿಮ, ಕ್ರೀಡೆಗಳು ನನ್ನ ನೆಚ್ಚಿನ ಹವ್ಯಾಸ. ‘ಬೈ ಬಿಲ್ಡ್ ಸೆಲ್’ ಎಂಬ ಪುಸ್ತಕ ಬರೆದಿದ್ದು ಶೀಘ್ರದಲ್ಲೆ ಬಿಡುಗಡೆಯಾಗಲಿದೆ ಎನ್ನುತ್ತಾರೆ ಡಾ.ಪದ್ಮ. 2019 ಆಗಸ್ಟ್ ತಿಂಗಳಲ್ಲಿ ಮೆಕ್ಸಿಕೊದಲ್ಲಿ ಮಿಸೆಸ್ ಯೂನಿವರ್ಸಲ್ ಸ್ಫರ್ಧೆ ನಡೆಯಲಿದೆ ಎಂದು ಡಾ.ಪದ್ಮ ತಿಳಿಸಿದ್ದಾರೆ.