ಉಡುಪಿ, ಅ 13 (DaijiworldNews/MS): ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠದ ತೀರ್ಪು ಗೊಂದಲ ಮೂಡಿಸಿದ್ದು, ತೀರ್ಪಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ದೇಶದ ಪ್ರಜೆಯಾಗಿ ತೀರ್ಪನ್ನು ಗೌರವಿಸುತ್ತೇವೆ ಎಂದು ಶ್ರೀ ರಾಮ ಸೇನೆ ಮುಖಂಡ ಮೋಹನ್ ಭಟ್ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಉಡುಪಿಯಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು,"ಮುಂದಿನ ಮುಖ್ಯ ನ್ಯಾಯಾಧೀಶರ ಪೀಠದಲ್ಲಿ ಹಿಜಾಬ್ ವಿರುದ್ದವೇ ತೀರ್ಪು ಬರುತ್ತದೆ. ಶಾಲೆಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅದರದ್ದೇ ಆದ ಕಾನೂನು ಇದೆ. ಸರಕಾರ, ಆಡಳಿತ ಮಂಡಳಿ ವಿದ್ಯಾರ್ಥಿಗಳಲ್ಲಿ ಬೇಧ ಭಾವ ಬರಬಾರದು ಎಂಬ ಕಾರಣಕ್ಕಾಗಿ ಸಮವಸ್ತ್ರ ಮಾಡಿದ್ದಾರೆ. ಆದರೆ ಈ ವಿವಾದ ಪಿಎಫ್ ಐ ಬೇಕೆಂದೆ ಎಬ್ಬಿಸಿದ ಕುರಿತು ಸಂಶಯ ಇದೆ ಎಂದು ಹೇಳಿದ್ದಾರೆ.
ನಮ್ಮ ದೇವಾಲಯಗಳನ್ನು ನಾಶ ಮಾಡಿ ಮಸೀದಿ ಕಟ್ಟಿದ್ದಾರೆ. ವಕ್ಫ್ ಬೋರ್ಡ್ ಮೂಲಕ ಗ್ರಾಮಗಳನ್ನೇ ತಮ್ಮ ಅಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಆಗುತ್ತಿದೆ. ಈಗ ಶಾಲೆಗಳನ್ನು ಕೂಡಾ ಕಂಟ್ರೊಲ್ ಮಾಡಲು ಹೊರಟಿದ್ದಾರೆ.ಅಲ್ಲೂ ಧರ್ಮದ ವಿಷ ಬೀಜವನ್ನು ಬಿತ್ತಿ ಕೋಮುವಾದವನ್ನು ಬಿತ್ತಲು ಪ್ರಯತ್ನ ಮಾಡುತ್ತಿದ್ದಾರೆ.ಶಾಲೆಗಳಲ್ಲಿ ಭೇದ ಭಾವ ಬರಬಾರದು ಎಂದು ದಿವಂಗತ ಇಂದಿರಾ ಗಾಂಧಿಯವರು ಸಮವಸ್ತ್ರ ಸಂಹಿತೆಯನ್ನು ಜಾರಿಗೆ ತಂದಿದ್ದರು.ಇದರ ಉದ್ದೇಶ ಶಾಲೆಗಳಲ್ಲಿ ಸಮಾನತೆಯಲ್ಲಿ ವಿದ್ಯಾರ್ಥಿಗಳು ಇರಬೇಕು ಎಂಬ ಕಾರಣಕ್ಕೆಇದೊಂದು ಒಳ್ಳೆಯ ಕಾನೂನು.
ಹಿಜಾಬ್ ಧರ್ಮದ ಅವಿಭಾಜ್ಯ ಅಂಗ ಎನ್ನುತ್ತಾರೆ. ಆದರೆ ಧರ್ಮದ ಅವಿಭಾಜ್ಯ ಅಂಗ ಎಂಬುವು ದಕ್ಕೆ ನಮ್ಮ ಆಕ್ಷೇಪ ಇಲ್ಲ ಅದನ್ನು ಅವರಿಗೆ ಬೇಕಾದಲ್ಲಿ ಪಾಲಿಸಲಿ. ಆದರೆ ಶಾಲೆಯ ಒಳಗೆ ಬೇಡ ಎನ್ನುವುದು ಸರಕಾರದ ವಾದ. ಹೈಕೋರ್ಟ್ ತೀರ್ಪಿನ ವಿರುದ್ದ ಪ್ರತಿಭಟನೆ ಮಾಡುತ್ತಾರೆ ಎಂದರೆ ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಯಾವುದೆ ಕಾರಣಕ್ಕೂ ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲಿ ಇವರ ಧರ್ಮವನ್ನು ಒಳಗೆ ಬರಲು ನಾವು ಬಿಡುವುದಿಲ್ಲ ಮುಂದಿನ ದಿನಗಳಲ್ಲಿ ಸುಪ್ರಿಂ ನ್ಯಾಯಾಧೀಶರು ಉತ್ತಮವಾದ ತೀರ್ಪು ನೀಡುತ್ತಾರೆ. ವಿದ್ಯಾರ್ಥಿಗಳಲ್ಲಿ ಸಮಾನತೆ ಬರುವ ದೃಷ್ಟಿಯಲ್ಲಿ ಸಮವಸ್ತ್ರ ಬೇಕೇ ಬೇಕು ಎಂದು ಹೇಳಿದ್ದಾರೆ.