ಉಡುಪಿ, ಅ 13 (DaijiworldNews/HR): ಪರ್ಕಳ ಈಶ್ವರನಗರದ ವಿವೇಕಾನಂದ ನಗರದಲ್ಲಿ ಅ.12ರಂದು ಬುಧವಾರ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, ಅಪಾರ ನಷ್ಟ ಸಂಭವಿಸಿದೆ.
ಬೆಂಕಿ ಅವಘಡದಲ್ಲಿ ಮನೆ ಸುಟ್ಟು ಕರಕಲಾಗಿದ್ದು, ಗೃಹೋಪಯೋಗಿ ಉಪಕರಣಗಳಾದ ಟಿವಿ, ಫ್ರಿಜ್, ಸೋಫಾ, ಬೆಡ್ ಸೇರಿದಂತೆ 1 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಬೆಂಕಿ ಹೊತ್ತಿಕೊಂಡಾಗ ಮನೆಯಲ್ಲಿ ಯಾರೂ ಇರಲಿಲ್ಲ. ನೆರೆಹೊರೆಯವರಿಗೆ ವಿಷಯ ತಿಳಿದು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಸ್ಥಳೀಯ ಸಿಎಂಸಿ ಸದಸ್ಯರು ಮನೆಗೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ.