ಮಂಗಳೂರು, ಅ 13 (DaijiworldNews/MS): ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತುರ್ತಾಗಿ ಪೈಪ್ ಲೈನ್ ಕಾಮಗಾರಿ ನಡೆಯಲಿದೆ.
ಪಣಂಬೂರು-ಕೆಐಒಸಿಎಲ್ ಮುಂದಿನ ಸರ್ವಿಸ್ ರಸ್ತೆಯ ಮುಖ್ಯ ಕೊಳವೆಯು ಒಡೆದು ನೀರು ಸೋರಿಕೆಯಾಗಿದ್ದು, ದುರಸ್ತಿಯ ಕಾರ್ಯ ನಡೆಯಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಅ.14ರ ಬೆಳಗ್ಗೆ 6ರಿಂದ ಅ.15ರ ಬೆಳಗ್ಗೆ 6ರವರೆಗೆ ಪಣಂಬೂರು, ಸುರತ್ಕಲ್, ಕೂಳೂರು, ಕೋಡಿಕಲ್, ಕಾಟಿಪಳ್ಳ, ಕಾನ, ಬಾಳ, ಕುಳಾಯಿ, ಮುಕ್ಕ, ಜಲ್ಲಿಗುಡ್ಡ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟನೆ ತಿಳಿಸಿದೆ.