ಬಂಟ್ವಾಳ, ಅ 12 (DaijiworldNews/SM): ಹಾಡುಹಗಲೇ ಬಿಸಿರೋಡಿನ ಹೃದಯ ಭಾಗದ ಅಂಗಡಿಯೊಂದರಿಂದ ಕ್ಯಾಸ್ ಡ್ರಾಯರ್ ಗೆ ಕೈ ಹಾಕಿ ಹಣ ಕಳ್ಳತನ ಮಾಡುವ ದೃಶ್ಯ ವೊಂದು ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಿಸಿರೋಡಿನ ತಾಲೂಕು ಆಡಳಿತ ಕೇಂದ್ರ ( ಮಿನಿ ವಿಧಾನ ಸೌಧದ ಕಚೇರಿ,) ಮುಂಭಾಗದಲ್ಲಿರುವ ಎಸ್.ಆರ್.ಟಯರ್ ಅಂಗಡಿಯಿಂದ ಸಾವಿರಾರು ರೂ ಕಳವು ಮಾಡಲಾಗಿದೆ. ಎಸ್.ಆರ್.ಟಯರ್ ಮಾಲಕ ಸಂದೀಪ್ ಅವರ ಅಂಗಡಿಯಿಂದ ಕಳ್ಳನೊರ್ವ ಹಣ ಎಗರಿಸುವ ದೃಶ್ಯ ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿದೆ.
ನಿನ್ನೆ ಆ.11 ರಂದು ಮಂಗಳವಾರ ಸುಮಾರು 12 ಗಂಟೆ ವೇಳೆಗೆ ಮಾಲಕ ಸಂದೀಪ್ ಅವರು ಅಂಗಡಿ ಮುಂಭಾಗದಲ್ಲಿ ಕಾರೊಂದು ಅಡ್ಡ ನಿಲ್ಲಿಸಲು ಬಂದ ವೇಳೆ ಆತನನ್ನು ಬದಿಗೆ ನಿಲ್ಲಿಸುವಂತೆ ತಿಳಿಸಲು ಅಂಗಡಿಯಿಂದ ತೆರಳಿದ ಸಮಯವನ್ನು ಸರಿಯಾಗಿ ಉಪಯೋಗಿಸಿ ಕೂಡಲೇ ಅಂಗಡಿ ಒಳಗೆ ನುಗ್ಗಿದ ಕಳ್ಳ ಕ್ಯಾಸ್ ಡ್ರಾಯರ್ ಓಪನ್ ಮಾಡಿ ಅದರಲ್ಲಿದ್ದ ಸುಮಾರು 10 ಸಾವಿರ ನಗದು ಹಣವನ್ನು ದೋಚಿಕೊಂಡು ಹೋಗುತ್ತಿರುವ ದೃಶ್ಯ ಸೆರೆ ಸಿಕ್ಕಿದೆ.
ಸಂದೀಪ್ ಅವರು ಹೊರಗೆ ಅಡ್ಡ ಇಟ್ಟಿದ್ದ ಕಾರನ್ನು ತೆರವುಮಾಡಲು ತಿಳಿಸಿ ವಾಪಾಸು ಬಂದು ಕ್ಯಾಸ್ ಡ್ರಾಯರ್ ಓಪನ್ ಆಗಿದ್ದು ಸಂಶಯಗೊಂಡು ನೋಡಿದಾಗ ನಗದು ಹಣ ನಾಪತ್ತೆಯಾದ ಪ್ರಕರಣ ಬೆಳಕಿಗೆ ಬಂದು ಬಳಿಕ ಸಿ.ಸಿ.ಕ್ಯಾಮರಾ ಚೆಕ್ ಮಾಡಿದಾಗ ಕಳವಾದ ಬಗ್ಗೆ ತಿಳಿದಿದೆ.