ಮಂಗಳೂರು, ಅ 11 (DaijiworldNews/SM): ದುಷ್ಕರ್ಮಿಗಳಿಂದ ಶಾರದ ಮಹೋತ್ಸವ ಬ್ಯಾನರ್ ಹಾನಿ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನವಾಗದ ಹಿನ್ನೆಲೆಯಲ್ಲಿ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ವಾಮಂಜೂರಿನ ಗ್ರಾಮಾಂತರ ಠಾಣೆಗೆ ಹಿಂದೂ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ.
ಆರೋಪಿಗಳ ಬಂಧನದ ವಿಳಂಬ ಹಿಂದೆ ಸ್ಥಳೀಯ ಕಾರ್ಪೊರೇಟರ್ ಪತಿಯ ಹಸ್ತಕ್ಷೇಪ ಎಂಬ ಆರೋಪ ಆರೋಪ ವ್ಯಕ್ತವಾಗಿದೆ.
ನಾಳೆ ಸಂಜೆ ಒಳಗೆ ಆರೋಪಿಗಳ ಬಂಧನ ಮಾಡದಿದ್ರೆ ಹಿಂದೂಪರ ಸಂಘಟನೆಗಳಿಂದ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಹಿಂದೂಪರ ಸಂಘಟನೆ ಕಾರ್ಯಕರ್ತರು ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.