ಉಡುಪಿ, ಅ 11 (DaijiworldNews/HR): ಹಾಲಿನ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಹಾಲಿನ ಮೇಲಿನ ಪ್ರೊತ್ಸಾಹ ಧನವನ್ನು ಕನಿಷ್ಟ 10 ರುಪಾಯಿಗೆ ಜಾಸ್ತಿ ಮಾಡಬೇಕೆಂದು ಸಹಕಾರ ಭಾರತಿ ಉಡುಪಿ ಜಿಲ್ಲಾ ಘಟಕ ಆಗ್ರಹಿಸಿದೆ.
ಈ ಕುರಿತು ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದ ಸಹಕಾರ ಭಾರತಿ ಹಾಲು ಪರ್ಕೋಷ್ಟದ ಸಂಚಾಲಕರಾದ ಸಾಣೂರು ನರಸಿಂಹ ಕಾಮತ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಪ್ರಾಕೃತಿಕ ವಿಕೋಪ ಮತ್ತು ಇನ್ನಿತರ ಕಾರಣಗಳಿಂದಾಗಿ ಪ್ರತಿ ಲಿಟರ್ ಹಾಲಿನ ಮೇಲಿನ ಉತ್ಪಾದನಾ ವೆಚ್ಚ ನಿರಂತರವಾಗಿ ಹೆಚ್ಚುತ್ತಿದೆ. ಇದರಿಂದಾಗಿ ರೈತರ ಕುಟುಂಬಗಳು ಹೈನುಗಾರಿಕೆಯಿಂದಲೇ ವಿಮುಖರಾಗುವ ಪರಿಸ್ಥಿತಿ ಬಂದಿದೆ. ರಾಜ್ಯದ ಕೆಎಂಎಪ್ ವ್ಯಾಪ್ತಿಯಲ್ಲಿ ಸರಿಸುಮಾರು 4 ರಿಂದ 5 ಲಕ್ಷದಷ್ಟು ದಿನವಹಿ ಹಾಲು ಸಂಗ್ರಹದಲ್ಲಿ ಇಳಿಕೆಯಾಗುತ್ತಿದೆ. ರೈತರ ಕಷ್ಟವನ್ನು ಮನಗಂಡು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕುಟ ಅಕ್ಟೋಬರ್ ತಿಂಗಳಿನಿಂದ ಹಾಲಿನ ಖರೀದಿ ದರಕ್ಕೆ ಹೆಚ್ಚುವರಿಯಾಗಿ 2.05 ರುಪಾಯಿ ಪ್ರೊತ್ಸಾಹ ಧನ ನೀಡುತ್ತಿದೆ. ಹಾಲು ಉತ್ಪಾದನಾ ವೆಚ್ಚ ಜಾಸ್ತಿಯಾಗಿರುವುದರಿಂದ ಸರಕಾರವು ಹೈನುಗಾರರಿಗೆ ನಿಡುವ ಪ್ರೊತ್ಸಾಹ ಧನವನ್ನು ಕನಿಷ್ಟ 10 ರುಪಾಯಿ ಜಾಸ್ತಿ ಮಾಡಬೇಕು. ಸರಕಾರ ಈ ಬಗ್ಗೆ ತುರ್ತು ಕ್ರಮವನ್ನು ಕೈಗೊಂಡು ಶೀಘ್ರವಾಗಿ ಹಾಲಿನ ದರ ಏರಿಸದಿದ್ದರೆದಿಪಾವಳಿ ಹಬ್ಬದ ಗೊಪೂಜೆ ಬಳಿಕ ಗ್ರಾಮೀಣ ಭಾಗದ ಹೈನುಗಾರರನ್ನು ಸಂಘಟಿಸಿ ರಾಜ್ಯಾದ್ಯಾಂತ ಪ್ರತಿಭಟನೆ ನಡೆಸಲಾವುದು ಎಂದು ಎಚ್ಚರಿಸಿದ್ದಾರೆ.
ಪತ್ರಿಕಾಗೊಷ್ಟಿಯಲ್ಲಿ ಉಡುಪಿ ಜಿಲ್ಲಾ ಸಹಕಾರ ಭಾರತಿ ಅಧ್ಯಕ್ಷರಾದ ಬೊಳ ಸದಾಶಿವ ಶೆಟ್ಟಿ, ಮಯಸೂರು ವಿಭಾಗ ಸಂಘಟನಾ ಪ್ರಮುಖ್ ಆದ ಮೊಹನ್ ಕುಮಾರ್ ಕುಂಬ್ಳೆಕರ್, ಹಾಲು ಪ್ರಕೋಷ್ಟದ ಪ್ರಮುಖ್ ಕಮಲಾಕ್ಷ ಹೆಬ್ಬಾರ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಉಪಸ್ಥಿತರಿದ್ದರು.