ಧರ್ಮಸ್ಥಳ, ಫೆ 14(MSP): ಧರ್ಮಸ್ಥಳ ಮಹಾಮಸ್ತಕಾಭಿಷೇಕದಲ್ಲಿ ಪಂಚಮಹಾವೈಭವದ ಮುಖ್ಯವೇದಿಕೆ ಫೆ.14 ರ ಗುರುವಾರ ಮಧ್ಯಾಹ್ನದ ಕುಸಿದು ಧರೆಗುರುಳಿದ್ದು ಭಾರಿ ಅನಾಹುತವೊಂದು ತಪ್ಪಿದೆ.ಘಟನೆಯಿಂದ ಇಬ್ಬರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದೆ ಎಂದು ತಿಳಿದುಬಂದಿದೆ.
ಪಂಚಮಹಾವೈಭವದ ನಾಲ್ಕನೇ ದಿನವಾದ ಇಂದು ಬೆಳಿಗ್ಗೆ ಪಂಚ ಮಹಾವೈಭವದ ಮುಖ್ಯವೇದಿಕೆಯಲ್ಲಿ ಪಂಚ ಮಹಾವೈಭವದಲ್ಲಿ ಬಾಹುಬಲಿಯ ಆಸ್ತಾನಕ್ಕೆ ಶರಣಗಾತಿಯ ಸನ್ನಿವೇಶ ನಡೆದಿತ್ತು. ಈ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಸಭಾ ಕಾರ್ಯಕ್ರಮ ನಡೆದಿದ್ದು ಈ ಸಂದರ್ಭದಲ್ಲಿ ಬೃಹತ್ ವೇದಿಕೆ ಮುಂಭಾಗ ಸಾವಿರಾರು ಜನರು ಭಾಗವಹಿಸಿದ್ದರು. ಸುಮಾರು 12.30ಕ್ಕೆ ಸಭಾ ಕಾರ್ಯಕ್ರಮಗಳು ಮುಗಿದ ಬಳಿಕ ಜನರೆಲ್ಲರೂ ಊಟಕ್ಕೆ ತೆರಳಿದ್ದಾರೆ. ಇದಾಗಿ ಸ್ವಲ್ಪ ಹೊತ್ತಿನಲ್ಲಿ ಸಂದರ್ಭ ಈ ಮುಖ್ಯ ವೇದಿಕೆ ಸಂಪೂರ್ಣ ಕುಸಿದಿದೆ. ಅದೃಷ್ಟವಶಾತ್ ಸಂಭವಿಸಬಹುದಾದ ದುರಂತ ತಪ್ಪಿದೆ. ಘಟನೆಯಿಂದ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.
ಕುಸಿದ ವೇದಿಕೆಯ ಅಡಿಯಲ್ಲಿ ಯಾರು ಸಿಲುಕಿಲ್ಲ ಎಂದು ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಿ.ಎಂ ಲಕ್ಷ್ಮೀಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ವೇದಿಕೆ ಕುಸಿದ ಪರಿಣಾಮ ಪಂಚ ಮಹಾವೈಭವದ ವೈಭವದ ಸೆಟ್ ಗೆ ಹಾನಿಯಾಗಿದೆ.