ಕಾಸರಗೋಡು, ಅ 11 (DaijiworldNews/MS): ಕನ್ನಡ ಭಾಷಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಟದ ನೇತೃತ್ವ ವಹಿಸಿದ್ದ ಬಿ. ಪುರುಷೋತ್ತಮ ಮಾಸ್ಟರ್ ಇಂದು ಮಧ್ಯಾಹ್ನ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. . ಬಿ.ಪುರುಷೋತ್ತಮ ಅವರು ಕಾಸರಗೋಡಿನ ಕನ್ನಡಿಗರ ಗುರು ಸಂತರೆಂದು ಗುರುತಿಸಲ್ಪಟ್ಟಿದ್ದರು. ಅವರು ಅನೇಕ ಕನ್ನಡ ಸಂಘಟನೆಗಳಲ್ಲಿ ನೇತೃತ್ವ ವಹಿಸಿದ್ದರು.
ಕರ್ನಾಟಕ ಸರ್ಕಾರದ ಗಡಿನಾಡು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಯ್ಯಾರ ಕಿಞ್ಞಣ್ಣ ರೈ ಅವರ ಸ್ಮರಣಾರ್ಥ ಮೊದಲ ಗಡಿನಾಡು ಕನ್ನಡ ಚೇತನ ಪ್ರಶಸ್ತಿಯು ಕಳೆದ ವರ್ಷ ಪುರುಷೋತ್ತಮ ಮಾಸ್ಟರ್ ಅವರಿಗೆ ಸಂದಿದೆ. ಪ್ರಸ್ತುತ ಕನ್ನಡ ಸಂಘ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಪತ್ನಿ ಜಯಂತಿ. ಶ್ಯಾಮಲಾ ಮತ್ತು ಪಾಂಡುರಂಗ ಮಕ್ಕಳು. ಪುರುಷೋತ್ತಮ ಮಾಸ್ಟರ್ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.