ಉಳ್ಳಾಲ, ಅ 11 (DaijiworldNews/MS): ಪಂಚಾಯಿತಿರಾಜ್ ವ್ಯವಸ್ಥೆ ಎಂದರೆ ಸಂವಿಧಾನ ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ಕೊಟ್ಟಂತಹ ದಿಟ್ಟ ಹೆಜ್ಜೆ ಹಾಗೂ ಅಧಿಕಾರ. ವಿಕೇಂದ್ರೀಕರಣದ ಕಲ್ಪನೆಯನ್ನು ಸಂಪೂರ್ಣ ನಿರ್ನಾಮ ಮಾಡಿ ಅಧಿಕಾರವನ್ನು ಕೇಂದ್ರೀಕರಣ ಮಾಡಲು ಹೊರಟಿರುವ ಬಿಜೆಪಿ ಸರಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಚಾಲಕ ಸುಭಾಷ್ ಚಂದ್ರ ಶೆಟ್ಟಿ ಕೊಳ್ನಾಡು ಆರೋಪಿಸಿದರು.
ಅವರು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಪಂಚಾಯತ್ ಅಧ್ಯಕ್ಷರ ಹಾಗೂ ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸಲು ಉದ್ದೇಶಿಸಿರುವ ರಾಜ್ಯ ಬಿಜೆಪಿ ಸರಕಾರದ ಕರಾಳ ನೀತಿಯ ವಿರುದ್ಧ ಬೆಳ್ಮ ದಲ್ಲಿರುವ ಉಳ್ಳಾಲ ತಾಲೂಕು ಪಂಚಾಯಿತಿ ಕಚೇರಿ ಎದುರುಗಡೆ ಹಮ್ಮಿಕೊಂಡ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕಲ್ಪನೆಯಂತೆ ಪಂಚಾಯಿತ್ ರಾಜ್ ಗೆ ಸ್ತ್ರೀಸರದ ಅಧಿಕಾರವನ್ನು ನೀಡಿದ್ದರು. ಗ್ರಾ.ಪಂ, ತಾ.ಪಂ ಹಾಗೂ ಜಿ.ಪಂ ಅನ್ನು ಗ್ರಾಮೀಣಾಭಿವೃದ್ಧಿ ಚಿಂತನೆಯಡಿ ನೀಡಲಾಗಿತ್ತು. ಎಸ್. ಎಂ ಕೃಷ್ಣ ಸರಕಾರ ೧೮ಯೋಜನೆಗಳನ್ನು ಗ್ರಾ.ಪಂ.ಗೆ ನೀಡಿತ್ತು. ಸಿದ್ಧರಾಮಯ್ಯ ಸರಕಾರ ರಮೇಶ್ ಕುಮಾರ್ ಅವರ ವರದಿಯಾಧರಿಸಿ 29 ಇಲಾಖೆಗಳನ್ನು ಪಂಚಾಯಿತಿರಾಜ್ ಇಲಾಖೆಗಳಡಿ ನೀಡಿದೆ. ಉದ್ಯೋಗ ಖಾತ್ರಿ ಯೋಜನೆಯ ಸಂಪೂರ್ಣ ಅಧಿಕಾರವನ್ನು ಪಂಚಾಯಿತಿ ಆಡಳಿತಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಸರಕಾರ ನೀಡುವ ಮೂಲಕ ಗ್ರಾಮಗಳನ್ನು ಸಬಲೀಕರಣಕ್ಕೆ ಮುನ್ನುಡಿ ಹಾಡಿದ್ದರು. ಆದರೆ ಕೇಂದ್ರೀಕರಣದ ಉದ್ದೇಶವನ್ನಿಟ್ಟುಕೊಂಡು ಇತಿಹಾಸದಲ್ಲಿಯೇ ಮೊದಲ ಬಾರಿ ಎರಡು ವರ್ಷಗಳ ಕಾಲ ಜಿ.ಪಂ ಹಾಗೂ ತಾ.ಪಂ ಗೆ ಚುನಾವಣೆ ನಡೆಸದೇ ಅದರ ಅಸ್ತಿತ್ವವನ್ನೇ ಬುಡಮೇಲಾಗಿಸಿ ಅಧಿಕಾರವನ್ನು ಹಂತಹಂತವಾಗಿ ಕಿತ್ತುಕೊಳ್ಳುವ ಕೆಲಸ ಮಾಡಿದೆ. ಪಂಚಾಯತ್ ರಾಜ್ ಪರ ಬಿಜೆಪಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಿಂದೆ ಧ್ವನಿ ಎತ್ತಿದವರು. ಎಲ್ಲರಿಗೂ ಅವರ ಮೇಲೆ ಉತ್ತಮ ಅಭಿಪ್ರಾಯವಿತ್ತು. ಆದರೆ ಇದೀಗ ಅವರ ಕೈಕೆಳಗಡೆಯೇ , ಅವರ ಸರಕಾರ ಪಂಚಾಯತ್ ರಾಜ್ ವ್ಯವಸ್ಥೆಯ ಒಂದೊಂದು ಅಧಿಕಾರವನ್ನು ಕಿತ್ತುಕೊಳ್ಳುತ್ತಿದ್ದರೂ ಮೌನವಹಿಸಿರುವುದು ದುರಾದೃಷ್ಟ. ಮೋದಿ-ಷಾ ಉಪದೇಶದ ಸರ್ವಾಧಿಕಾರಕ್ಕೆ ಕೈಕಟ್ಟಿ ಕುಳಿತಂತಿದೆ. ವ್ಯವಸ್ಥೆಯ ಮೇಲೆ ವಿಶ್ವಾಸವಿದ್ದರೆ ಕ್ಯಾಬಿನೆಟ್ ಗೆ ರಾಜೀನಾಮೆ ಕೊಟ್ಟು ಹೋರಾಟದ ಜತೆ ಕೈಜೋಡಿಸಲಿ. ಸಂವಿಧಾನದ ಅಡಿಪಾಯ ಗ್ರಾ.ಪಂ , ಅಲ್ಲಿ ನಡೆಸುವ ಸಾಮಾನ್ಯ ಸಭೆಯ ಪರಮಾಧಿಕಾರವನ್ನು ಕಿತ್ತು , ಸರಕಾರವೇ ಗ್ರಾಮಕ್ಕೂ ಪ್ರವೇಶಿಸಿ ಅಲ್ಲಿಯೂ ಶೇ.೪೦% ದಂಧೆಯನ್ನು ವಿಸ್ತರಿಸುವ ಉದ್ದೇಶವಿದೆ. ಈಗಾಗಲೇ ರಾಷ್ಟ್ರಧ್ವಜಕ್ಕೆ ಧ್ವಜಸ್ತಂಭದ ನಿರ್ಮಾಣಕ್ಕೆ ಟೆಂಡರ್ ಪಡೆದು ರಾಷ್ಟ್ರಧ್ವಜದಲ್ಲಿಯೂ ಕಮಿಷನ್ ಹೊಡೆಯುವ ದೇಶಭಕ್ತರು ಬಿಜೆಪಿಗರಾಗಿದ್ದಾರೆ. ೧೫ನೇ ಹಣಕಾಸು ಯೋಜನೆಯಡಿ ಮೋದಿ ಸರಕಾರ ೨೫ % ಶೇ. ಅನುದಾನ ಕಡಿತಗೊಳಿಸಿದೆ. ಪಂಚಾಯಿತಿ ಅಧಿಕಾರ ಖರ್ಚು ಮಾಡುವ ಸ್ವಾತಂತ್ರ್ಯವನ್ನು ಕಸಿಯಲಾಗಿದೆ. ಐದು ವರ್ಷಗಳಿಂದ ವಸತಿಯೋಜನೆಯೇ ಇಲ್ಲದಾಗಿದೆ. ಜನರಿಗೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ. ಜನಪ್ರತಿನಿಧಿಗಳು ಇರಬೇಕಾದ ಜಿ.ಪಂ, ತಾ.ಪಂ.ಗಳಲ್ಲಿ ಅಧಿಕಾರಿಗಳೇ ಕುಳಿತು ಕ್ರಿಯಾಯೋಜನೆಗಳನ್ನು ರಚಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿಯೇಟು ಬಿಜೆಪಿ ನೀಡಿದೆ ಎಂದರು.
ಹೈದರ್ ಕೈರಂಗಳ ಪ್ರಾಸ್ತಾವಿಕ ಮಾತನ್ನಾಡಿದರು. ನಝರ್ ಷಾ ಪಟ್ಟೋರಿ ಸ್ವಾಗತಿಸಿದರು. ರಝಾಕ್ ಕುಕ್ಕಾಜೆ ನಿರೂಪಿಸಿದರು. ಅಬ್ದುಲ್ ಸತ್ತಾರ್ ವಂದಿಸಿದರು.
ಈ ಸಂದರ್ಭ ಜಿ.ಪಂ ಮಾಜಿ ಉಪಾಧ್ಯಕ್ಷ ಎಂ.ಎಎಸ್ ಮೊಹಮ್ಮದ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಜಿಲ್ಲಾ ಕಾಂಗ್ರೆಸ್ ಪ್ರ.ಕಾ ಶುಭೋದಯ ಆಳ್ವ, ತಾ.ಪಂ ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು, ಮಾಜಿ ಸದಸ್ಯ ಚಂದ್ರಹಾಸ್ ಕರ್ಕೇರ, ಮುಖಂಡರುಗಳಾದ ಪದ್ಮನಾಭ ನರಿಂಗಾನ, ನಾಸಿರ್ ನಡುಪದವು, ಟಿ.ಎಸ್ ಅಬ್ದುಲ್ಲಾ, ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಮಲ್ಲಿಕಾ ಪಕಳ, ವೃಂದಾ ಪೂಜಾರಿ, ಮಹಮ್ಮದ್ ಮುಸ್ತಾಫ ಹರೇಕಳ, ಎ.ಕೆ ರೆಹಮಾನ್ , ಅಝೀಝ್ ಆರ್.ಕೆ.ಸಿ, ಝಕರಿಯಾ ಮಲಾರ್, ಸುದರ್ಶನ್ ಶೆಟ್ಟಿ, ಅಬ್ದುಲ್ ಸತ್ತಾರ್ ಬೆಳ್ಮ , ಚಂಚಲಾಕ್ಷಿ, ಫಿರೋಝ್ ಮಲಾರ್, ಬದ್ರುದ್ದೀನ್ ಹರೇಕಳ, ವಿಲ್ಫ್ರೆಡ್ ಡಿಸೋಜ, ಶೈಲಜಾ ಶೆಟ್ಟಿ, ಆಗ್ನೆಸ್ ಡಿಸೋಜ ಇರಾ, ಲತಾ ಹರಿಪ್ರಸಾದ್, ಗಣೇಶ್ ನಾಯ್ಕ್, ಜೆಸಿಂತಾ ಸಿಕ್ವೇರಾ, ನಾಸಿರ್ ಸಾಮಣಿಗೆ, ಸುದರ್ಶನ್ ಶೆಟ್ಟಿ, ಇಬ್ರಾಹಿಂ ನಡುಪದವು, ಇಮ್ತಿಯಾಝ್ ಪಜೀರ್, ಸಿ.ಎಂ ಶರೀಫ್, ಅಚ್ಚುತ್ತ ಗಟ್ಟಿ, ರೆಹಮಾನ್ ಕೋಡಿಜಾಲ್, ಮಹಮ್ಮದ್ ಪಾನೇಲ ಪಜೀರು, ಯೂಸುಫ್ ಬಾವ, ಯೂಸುಫ್ ಪಾನೇಲ, ಜಬ್ಬಾರ್ ಬೋಳಿಯಾರ್, ವಿನ್ಸೆಂಟ್ ಡಿಸೋಜ, ರಫೀಕ್ ಅಂಬ್ಲಮೊಗರು, ಇಕ್ಬಾಲ್, ಶುಕೂರ್ ಬೋಳಿಯಾರ್,ಜುಬೈರ್ ತಲೆಮೊಗರು, ಸಿ.ಎಂ ಶರೀಫ್, ನುಸ್ರತ್ ಹರೇಕಳ, ರವಿರಾಜ್ ಶೆಟ್ಟಿ, ಕಬೀರ್ , ಖಲೀಲ್ ಪಟ್ಟೋರಿ, ಪದ್ಮನಾಭ ಮುಟ್ಟಿಂಜ, ಮೊಹ್ಮದ್ ಇಕ್ಬಾಲ್ ದೇರಳಕಟ್ಟೆ, ಸಮೀರ್ ಪಜೀರ್, ಅಬ್ದುಲ್ಲಾ ಎಂ.ಎ ರೆಂಜಾಡಿ, ಎಸ್. ಪಿ ಸುಲೈಮಾನ್ , ಹನೀಫ್ ಬಾಳೆಪುಣಿ, ಇಸ್ಮಾಯಿಲ್, ಮಹಮ್ಮದ್ ಬೋಳಿಯಾರ್ ಮುಂತಾದವರು ಉಪಸ್ಥಿತರಿದ್ದರು.
ಪ್ರತಿಭಟನೆ ಬಳಿಕ ಸರಕಾರಕ್ಕೆ ಜಿಲ್ಲಾ ಪಂಚಾಯಿತಿ ಇ.ಒ ರಾಜಣ್ಣ ಮೂಲಕ ಮನವಿಯನ್ನು ಸಲ್ಲಿಸಲಾಯಿತು.