ಕಾರ್ಕಳ, ಅ 11 (DaijiworldNews/MS): ಕಳೆದ ಕೆಲ ದಿನಗಳಿಂದ ಕಾರ್ಕಳದ ಜನತೆಯಲ್ಲಿಆತಂಕ ಮೂಡಿಸಿದ್ದ ಕಾಳಿಂಗ ಸರ್ಪವನ್ನು ಅನಿಲ್ ಪ್ರಭು ಸೆರೆಹಿಡಿದ್ದಾರೆ.
ಅನಂತಶಯನ ತೆಳ್ಳಾರು ರಸ್ತೆಯ ವಕೀಲರ ಮನೆಯೊಂದರ ಬಳಿ ತಿರುಗಾಡುತ್ತಿದ್ದನ್ನು ಪುರಸಭಾ ಸದಸ್ಯ ಶುಭದರ್ ಗಮನಕ್ಕೆ ತಂದಿದ್ದು ಕೂಡಲೇ ಅನಿಲ್ ಪ್ರಭು ರವರನ್ನು ಸಂಪರ್ಕಿಸಿ ಕಾಳಿಂಗ ಸರ್ಪವನ್ನು ಸೆರೆಹಿಡಿಯಲಾಯಿತು.
ಈ ಸಂದರ್ಭ ಮಾತನಾಡಿದ ಪುರಭ ಸದಸ್ಯ ಶುಭದ ರಾವ್ ''ಅನೇಕ ಸಮಯಗಳಿಂದ ಕಾಳಿಂಗ ಸರ್ಪಗಳು ನಗರ ಪ್ರದೇಶಕ್ಕೆ ಬರಲು ಆರಂಭಿಸಿದೆ.ಅದನ್ನು ಹಿಡಿಯುವ ಸೂಕ್ತ ಕ್ರಮ ಇಲಾಖೆಯಿಂದ ಮಾಡಬೇಕು ಅಥವಾ ಇಲಾಖೆಯಿಂದಲೇ ಅನಿಲ್ ಪ್ರಭುರವರಂತವರಿಗೆ ಅಧಿಕೃತವಾಗಿ ಹಾವು ಹಿಡಿಯುವ ಅವಕಾಶ ಮಾಡಿಕೊಟ್ಟು ಆದೇಶ ಕೊಡಬೇಕು. ಇಲ್ಲದಿದ್ದರೆ ವಿಷಕಾರಿ ಹಾವು ಹಿಡಿಯುವ ಸಂದರ್ಭ ಪ್ರಾಣಾಪಾಯ ಆಗುವ ಸಂಭವವಿರುತ್ತದೆ.ಅನಿಲ್ ಪ್ರಭುರವರಿಗೆ ಭದ್ರತೆ ಒದಗಿಸಿಕೊಡಬೇಕು ಹಾಗೂ ಸರ್ಕಾರದಿಂದ ಸಂಭಳ ನೀಡುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಸುಮಾರು 14 ಅಡಿ ಉದ್ದದ ಕಾಳಿಂಗಸರ್ಪವನ್ನು ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ್ ರವರ ಸಮ್ಮುಖದಲ್ಲಿ ಕುದುರೆಮುಖ ಅರಣ್ಯಕ್ಕೆ ಕೊಂಡೊಯ್ಯುವ ವ್ಯವಸ್ಥೆ ಮಾಡಲಾಯಿತು.