ಕಾಸರಗೋಡು, ಅ 11 (DaijiworldNews/MS): ಜ್ಯೂಸ್ ನಲ್ಲಿ ನಿಷೇಧಿತ ಪಾನ್ ಮಸಾಲ ಉತ್ಪನ್ನ ಬೆರೆಸಿ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲಕನನ್ನು ಹೊಸದುರ್ಗ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಹೊಸದುರ್ಗ ಮೀನಾಫೀಸ್ ಕಡಪ್ಪುರದ ಅಬ್ದುಲ್ ಸತ್ತಾರ್ (48) ಬಂಧಿತ ಆರೋಪಿ.
ಜ್ಯೂಸ್ ನ ರುಚಿ ಹೆಚ್ಚಿಸಲು ಹಾಗೂ ಗ್ರಾಹಕರನ್ನು ಆಕರ್ಷಿಸಲು ಪಾನ್ ಮಸಾಲ ಹುಡಿಯನ್ನು ಜ್ಯೂಸ್ ಗೆ ಬೆರೆಸುತ್ತಿದ್ದನು. ಈ ಜ್ಯೂಸ್ ಅಂಗಡಿಗೆ ದೂರ ದೂರಿನಿಂದ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಮಂದಿ ಬರುತ್ತಿದ್ದು, ಈ ಬಗ್ಗೆ ಪರಿಸರವಾಸಿಗಳು ನೀಡಿದ ಮಾಹಿತಿಯಂತೆ ಪೊಲೀಸರು ನಿಗಾ ಇರಿಸಿದ್ದರು. ಇದರಂತೆ ನಿನ್ನೆ ರಾತ್ರಿ ಡಿ ವೈ ಎಸ್ಪಿ ಪಿ. ಪಿ ಬಾಲಕೃಷ್ಣ ನ್ ನೇತೃತ್ವದ ಪೊಲೀಸ್ ತಂಡ ತಪಾಸಣೆ ನಡೆಸಿದ್ದು, ಅಂಗಡಿಯಿಂದ ನಿಷೇಧಿತ ಪಾನ್ ಉತ್ಪನ್ನವಾದ ' ಕೂಲ್' ನ್ನು ವಶಪಡಿಸಿಕೊಂಡಿದೆ . ಅಂಗಡಿಯ ಲೈಸೆನ್ಸ್ ನ್ನು ರದ್ದು ಪಡಿಸಲು ನಗರ ಸಭೆಗೆ ಮನವಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.