ಸುರತ್ಕಲ್, ಫೆ 14(MSP): ಪುರುಷರಿಲ್ಲದ ಮನೆಯನ್ನೇ ಟಾರ್ಗೆಟ್ ಮಾಡಿ, ಮಹಿಳೆಯರು ಸ್ನಾನ ಮಾಡುತ್ತಿದ್ದ ವಿಡಿಯೋ ಮಾಡುತ್ತಿದ್ದ ಕಾಮುಕ ಯುವಕನೊಬ್ಬನನ್ನು ಹಿಡಿದ ಸಾರ್ವಜನಿಕರು ಆತನಿಗೆ ಧರ್ಮದೇಟು ನೀಡಿ ಬಳಿಕ ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಪುರದಲ್ಲಿ ನಡೆದಿದೆ.
ಆರೋಪಿಯನ್ನು ರವೂಫ್ ಎಂದು ಗುರುತಿಸಲಾಗಿದೆ. ಕೃಷ್ಣಾಪುರದಲ್ಲಿ ಒಂಟಿಯಾಗಿ ವಾಸವಿರುವ ಮಹಿಳೆಯರ ಅಥವಾ ಪುರುಷರಿಲ್ಲದ ಮನೆಗಳನ್ನು ಟಾರ್ಗೆಟ್ ಮಾಡಿ ರಾತ್ರಿ ಹೊತ್ತಿನಲ್ಲಿ ಒಳನುಗ್ಗುತ್ತಿದ್ದ ಆರೋಪಿ ಹೆಣ್ಣು ಮಕ್ಕಳು ಸ್ನಾನ ಮಾಡುವ ಸಂದರ್ಭಕ್ಕಾಗಿ ಹೊಂಚುಹಾಕಾಕಿ ಬಾತ್ ರೂಂ ಕಿಟಕಿಯಿಂದ ಮೊಬೈಲ್ ಮೂಲಕ ಚಿತ್ರೀಕರಣ ನಡೆಸುತ್ತಿದ್ದ ಎನ್ನಲಾಗಿದೆ.
ಕೃಷ್ಣಾಪುರದಲ್ಲಿ ಇದೇ ರೀತಿ ವಿಡಿಯೋ ರೆಕಾರ್ಡಿಂಗ್ ಮಾಡುತ್ತಿದ್ದಾಗ ಮಹಿಳೆ ಕಿರುಚಿಕೊಂಡಿದ್ದು, ಎಚ್ಚೆತ್ತ ಸ್ಥಳೀಯರು ಈತನನ್ನು ರೆಡ್ಹ್ಯಾಂಡಾಗಿ ಹಿಡಿದು ಧರ್ಮದೇಟು ನೀಡಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಹಿಂದೆಯೂ ಅನೇಕ ಸಾರಿ ಈ ರೀತಿ ಮಾಡಿದ್ದು ನಿಜ ಎಂದು ತಪ್ಪೊಪ್ಪಿಕೊಂಡಿದ್ದಾನೆ.