ಉಡುಪಿ, ಅ 10 (DaijiworldNews/HR): ದೀಪಾವಳಿಯ ವಿಶೇಷ ಸಂಧರ್ಭದಲ್ಲಿ ದಾಯ್ಜಿವಲ್ಡ್ ಉಡುಪಿ, ಕಿಶೂ ಎಂಟರ್ ಪ್ರೈಸಸ್, ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಆಶ್ರಯದಲ್ಲಿ ರಂಗಿನ ರಂಗೋಲಿ 2022 ಸ್ಪರ್ಧೆಯನ್ನು ಸಾರ್ವಜನಿಕರಿಗಾಗಿ ಆಯೋಜಿಸಿದೆ.
ರಂಗಿನ ರಂಗೋಲಿ ಸ್ಪರ್ಧೆಯು ಸತತವಾಗಿ ಮೂರನೇ ಬಾರಿಗೆ ನಡೆಯುತ್ತಿದ್ದು, ಸ್ಪರ್ಧೆಯು ಭಾನುವಾರ ಆಕ್ಟೋಬರ್ 16 ರಂದು ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಕನ್ನರ್ಪಾಡಿ ಇಲ್ಲಿ ನಡೆಯಲಿದೆ.
ನೋಂದಾವಣೆಗೆ ಕೊನೆಯ ದಿನಾಂಕ ಅಕ್ಟೋಬರ್ 14, 2022.
ಸ್ಪರ್ಧೆಯ ನಿಯಮಗಳು :
· ಎಲ್ಲರಿಗೂ ಮುಕ್ತ ಅವಕಾಶ (Open to all)
· ರಂಗೋಲಿಯ ಗಾತ್ರ 4*4 ಫೀಟ್ ಮೀರಬಾರದು.
· ಸ್ಪರ್ಧಿಗಳಿಗೆ ಗರಿಷ್ಠ 2 ಗಂಟೆಯ ಕಾಲಾವಕಾಶ ಇದೆ.
· ಕೇವಲ ರಂಗೋಲಿ ಪುಡಿ ಬಳಸಿ, ರಂಗೋಲಿಯನ್ನು ಬಿಡಿಸಬೇಕು
· ರಂಗೋಲಿ ಬಿಡಿಸಲು ಅಗತ್ಯವಿರುವ ವಸ್ತುಗಳನ್ನು ಸ್ಪರ್ಧಿಗಳೇ ತರಬೇಕು.
· ಸ್ಪರ್ಧಿಗಳ ಕ್ರಿಯಾಶೀಲತೆಗೆ ಹೆಚ್ಚಿನ ಆದ್ಯತೆ.
· ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ನೀಡಲಾಗುವುದು.
ವಿಜೇತರಿಗೆ ಆಕರ್ಷಕ ನಗದು ಬಹುಮಾನವಾಗಿ ಪ್ರಥಮ ಬಹುಮಾನ ರುಪಾಯಿ 5 ಸಾವಿರ , ದ್ವಿತೀಯ ಬಹುಮಾನ 4 ಸಾವಿರ ಮತ್ತು ತೃತೀಯ ಬಹುಮಾನ 3 ಸಾವಿರದ ಜೊತೆಗೆ ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುವುದು. ಮೂರು ಸಮಾಧಾನಕರ ಬಹುಮಾನ ಕೂಡಾ ಇದೆ.
ನೊಂದಾವಣೆ ಮತ್ತು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ದಾಯ್ಜಿವಲ್ಡ್ ಉಡುಪಿ
ಮೂರನೇ ಮಹಡಿ, ಮಾಂಡವಿ ಟ್ರೇಡ್ ಸೆಂಟರ್
ಕಡಿಯಾಳಿ, ಉಡುಪಿ.