ಮಂಗಳೂರು,ಫೆ 14(MSP): ಪ್ರೇಮಿಗಳ ದಿನಾಚರಣೆ ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದ್ದು ಇದರ ಅಗತ್ಯ ಭಾರತೀಯರಿಗಿಲ್ಲ ಎಂದು ಪರ, ವಿರೋಧದ ಚರ್ಚೆಗಳ ನಡುವೆಯೇ ಮತ್ತೆ 2019 ರ ವ್ಯಾಲೆಂಟೈನ್ಸ್ ಡೇ ಬಂದುಬಿಟ್ಟಿದೆ. ಇದೇ ಕಾರಣಕ್ಕೆ ಮಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯುವುದು ಬೇಡ ಎಂದು ಭದ್ರತೆ ಹೆಚ್ಚಿಸಲಾಗಿದೆ..!
ಹೌದು ಪ್ರೇಮಿಗಳ ದಿನಾಚರಣೆ ಹಿನ್ನಲೆಯಲ್ಲಿ ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ಇಬ್ಬರು ಡಿಸಿಪಿ, ನಾಲ್ವರು ಎಸಿಪಿ,16 ನಿರೀಕ್ಷಕರು, 16 ಮಂದಿ ಎಸ್ ಐಗಳು, 450 ಮಂದಿ ಪೊಲೀಸ್ ಸಿಬ್ಬಂದಿ , 2 ಕೆಎಸ್ ಆರ್ ಪಿ ತುಕಡಿ ಹಾಗೂ 6 ಪಿಎಆರ್ ಅಧಿಕಾರಿಗಳನ್ನು ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದೆ ಎಂದು ಪೊಲೀಸ್ ಇಲಾಖೆ ತನ್ನ ಪ್ರಕಟಣೆ ತಿಳಿಸಿದೆ.