ಕಾಸರಗೋಡು, ಅ 09 (DaijiworldNews/HR): ಇತ್ತೀಚೆಗೆ ಪಾಲ್ಘಟಿನ ವಡಕಾಂಚೇರಿಯಲ್ಲಿ ಟೂರಿಸ್ಟ್ ಬಸ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ 9 ಮಂದಿ ಸಾವಿಗೀಡಾದ ಘಟನೆಗೆ ಸಂಬಂಧಿಸಿ ರಾಜ್ಯ ಮೋಟಾರ್ ವಾಹನ ಇಲಾಖೆ ಆರಂಭಿಸಿರುವ ಆಪರೇಶನ್ ಫೋಕಸ್ -3 ಕಾರ್ಯಾಚರಣೆ ನಡೆಸಿ ಕಾಸರಗೋಡು ಜಿಲ್ಲೆಯ ಎರಡು ಬಸ್ಗಳು ಸೇರಿದಂತೆ ಒಟ್ಟು 134 ಟೂರಿಸ್ಟ್ ಬಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಒಟ್ಟು 134 ಟೂರಿಸ್ಟ್ ಬಸ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದಕ್ಕೆ ಸಂಬಂಧಿಸಿ ಒಟ್ಟು 2,38,500 ರೂ. ದಂಡ ವಸೂಲಿ ಮಾಡಲಾಗಿದೆ.
ಇನ್ನು ಪಾಲ್ಘಟಿನ ವಡಕಾಂಚೇರಿಯಲ್ಲಿ ಟೂರಿಸ್ಟ್ ಬಸ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ 9 ಮಂದಿ ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ.