ಉಡುಪಿ, ಅ 08 (DaijiworldNews/HR): ಸಲಾಂ ಆರತಿ ಅನ್ನೋದರ ಬದಲು ನಮಸ್ತೆ ಆರತಿ ಎಂದು ಮಾಡಿದರಾಯ್ತು. ಪೂಜೆಯಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಲಾಂ ಆರತಿ ಎಂದು ಹೇಳುವ ಅವಶ್ಯಕತೆ ಇಲ್ಲ. ರೈಲಿಗೆ ಟಿಪ್ಪು ಹೆಸರು ತೆಗೆದು ಒಡೆಯರ್ ಹೆಸರಿಟ್ಟಿಲ್ವಾ? ರೈಲಿಗೆ ಒಡೆಯರ್ ಹೆಸರಿಟ್ಟು ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ರಾಜ್ಯಕ್ಕೆ ಒಡೆಯರ್ ಕೊಡುಗೆ ತುಂಬಾ ಇದೆ. ಕೇಂದ್ರ ಸರಕಾರ ಬಹಳ ಒಳ್ಳೆಯ ಕೆಲಸ ಮಾಡಿದೆ ಎಂದರು.
ಇನ್ನು ಆಚಾರ್ಯ ಮಧ್ವರ ಜಯಂತಿ ಆಚರಣೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಆಚಾರ್ಯ ಮಧ್ವರು ತ್ರಿಮಸ್ಥರಲ್ಲಿ ಒಬ್ಬರು. ಕರ್ನಾಟಕದಲ್ಲಿ ಹುಟ್ಟಿದವರು ಮಧ್ವಾಚಾರ್ಯರು ಆಚಾರ್ಯ ಮಧ್ವ ಜಯಂತಿಯನ್ನು ಸರ್ಕಾರದಿಂದಲೇ ಆಚರಿಸಬೇಕು ಎಂದು ಆಗ್ರಹಿಸುತ್ತೇನೆ. ನಮ್ಮ ರಾಜ್ಯದ ಒಬ್ಬ ಆಚಾರ್ಯರ ಗೌರವವನ್ನು ಉಳಿಸಬೇಕು. ಮುಂದಿನ ವರ್ಷವಾದರೂ ಮಧ್ವಾಚಾರ್ಯ ಜಯಂತಿ ಜಾರಿ ಆಗಬಹುದು ಎನ್ನುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.