ಉಡುಪಿ, ಅ 08 (DaijiworldNews/HR): ಮಲ್ಪೆ ಮೀನುಗಾರಿಕಾ ಬಂದರಿನ ಎರಡನೇ ಟಿ ಜೆಟ್ಟಿಯಲ್ಲಿ ಆಕಸ್ಮಿಕವಾಗಿ ದೋಣಿಯಿಂದ ಜಾರಿ ಬಿದ್ದು ಮೀನುಗಾರರೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಹೆಜಮಾಡಿ ಕೋಡಿ ನಿವಾಸಿ ರಮೇಶ್ ಕೋಟ್ಯಾನ್ (75) ಎಂದು ಗುರುತಿಸಲಾಗಿದೆ.
ರಮೇಶ್ ಅವರು ಗುರು ರಾಘವೇಂದ್ರ ದೋಣಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಅವರು ಮುಂಜಾನೆ 4 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋಗಿದ್ದರು ಮತ್ತು 5.30 ಕ್ಕೆ ದೋಣಿ ಲಂಗರು ಹಾಕಲು ಹೊರಟಿದ್ದಾಗ ಈ ಘಟನೆ ಸಂಭವಿಸಿದೆ.
ಅವರ ಪಾರ್ಥಿವ ಶರೀರವನ್ನು ಬಂದರಿನಲ್ಲಿ ಬೆಳಗ್ಗೆ 7.30ಕ್ಕೆ ಪತ್ತೆ ಮಾಡಲಾಗಿದ್ದು, ಮೃತ ದೇಹವನ್ನು ಮುಳುಗು ತಜ್ಞ ಈಶ್ವರ್ ಮಲ್ಪೆ ಮೇಲಕ್ಕೆತ್ತಿದ್ದಾರೆ.
ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.