ಮಂಗಳೂರು, ಅ 08 (DaijiworldNews/HR): ಆಂಬ್ಯುಲೆನ್ಸ್ ಮತ್ತು ಬಸ್ ನಡುವೆ ಅಪಘಾತ ಸಂಭವಿಸಿದ್ದು, ಆ್ಯಂಬುಲೆನ್ಸ್ ಚಾಲಕ ಗಾಯಗೊಂಡು ರೋಗಿ ಅಪಾಯದಿಂದ ಪಾರಾಗಿರುವ ಘಟನೆ ಕುಲಶೇಖರದಲ್ಲಿ ನಡೆದಿದೆ.
ಅಪಘಾತದ ರಭಸಕ್ಕೆ ಆ್ಯಂಬುಲೆನ್ಸ್ ಜಖಂ ಗೊಂಡಿದ್ದು, ರೋಗಿಯನ್ನು ಮತ್ತು ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಈ ಬಗ್ಗೆ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.