ಬಂಟ್ವಾಳ, ಅ 07 (DaijiworldNews/HR): ಅಲ್ಯೂಮಿನಿಯಂ ಕೊಕ್ಕೆ ಬಳಸಿ ತೆಂಗಿನಕಾಯಿ ಕೀಳುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕೇಪು ನಿರ್ಕಾಜೆಯಲ್ಲಿ ನಡೆದಿದೆ.
ಮೃತರನ್ನು ಕೇಪು ನಿರ್ಕಾಜೆ ನಿವಾಸಿ ಶೀನ ಗೌಡ(58) ಎಂದು ಗುರುತಿಸಲಾಗಿದೆ.
ಇವರು ಮೊದಲು ವಿಟ್ಲದ ಕೂಡೂರಿನಲ್ಲಿ ವಾಸವಾಗಿದ್ದು, ಪ್ರಸ್ತುತ ನಿರ್ಕಾಜೆಯಲ್ಲಿ ವಾಸವಾಗಿದ್ದರು.
ಇನ್ನು ನೆರೆಮನೆಯ ಅಲ್ಯೂಮಿನಿಯಂ ಕೊಕ್ಕೆ ಬಳಸಿ ತೆಂಗಿನಕಾಯಿ ಕೀಳುತ್ತಿರುವಾಗ ವಿದ್ಯುತ್ ತಗುಲಿದ ಪರಿಣಾಮ ಸ್ಥಳದಲ್ಲಿಯೇ ಅವರು ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ.