ಕಾರ್ಕಳ, ಅ 06(DaijiworldNews/MS): ಹೆತ್ತವರ ಹಾಗೂ ದೇಶದ ಋಣ ನಮ್ಮ ಮೇಲಿದೆ ಅದನ್ನು ನಿರ್ವಹಿಸುವುದು ನಮ್ಮ ಕರ್ತವ್ಯ ವಾಗಿದೆ . ಹೆತ್ತವರು ದೇವರ ಸ್ವರೂಪಿಗಳು ಅವರನ್ನು ಪೂಜಿಸಲೆ ಬೇಕು , ಧರ್ಮದ ಪಾಲನೆಯಾಗಬೇಕಾದರೆ ದೇವಾಲಯಗಳು ಸಂಘಟನೆಗಳು ಕೆಲಸ ಮಾಡಬೇಕು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು .
ಎಣ್ಣೆಹೊಳೆ ಹಿರ್ಗಾನದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು . ತನು-ಮನ-ಧನಗಳನ್ನು ಕೊಟ್ಟು ಹಿಂದು ಸಂಘಟನೆಗಳನ್ನು ಬೆಂಬಲಿಸುವುದು ಅಗತ್ಯತೆ ಪ್ರತಿಯೊಬ್ಬ ಹಿಂದುವಿನ ಜವಾಬ್ದಾರಿಯಾಗಿದೆ. ಹಿಂದುತ್ವದ ಸೇನಾನಿಗಳು ಯಾವುದೇ ಫಲಪೇಕ್ಷೆ ಇಲ್ಲದೇ ಸಂಘಟನೆಗೆ ಜೀವವನ್ನೇ ಮುಡಿಪಾಗಿಟ್ಟು ತತ್ವ-ಸಿದ್ಧಾಂತವನ್ನು ಅನುಸರಿಸುತ್ತಿದ್ದಾರೆ.
ರಾಜ್ಯ ಬಿಜೆಪಿಯನ್ನು ಕುಟುಕಿದ ಮುತಾಲಿಕ್ : ಪ್ರವೀಣ್ ನೆಟ್ಟಾರ್ ಸಾಂತ್ವಾನ ನೀಡಲು ಹೋದಾಗ ಗಡಿಯಲ್ಲಿಯೇ ನಮ್ಮನ್ನು ಹೊರಗೆ ಕಳುಹಿಸಿದ್ದಾರೆ. ಹಿಂದೂ- ಧರ್ಮ ಜಾಗೃತಿಗಾಗಿ ನನ್ನ ಮೇಲೆ 109 ಕೇಸು ದಾಖಲಿಸಿದ್ದಾರೆ. ನಮ್ಮವರೆ ಮುಳ್ಳಾಗಿ ಪರಿಣಮಿಸಿದ್ದಾರೆ ಅವರನ್ನು ಬುದ್ದಿಕಲಿಸಬೇಕು ಎಂದು ರಾಜ್ಯ ಬಿಜೆಪಿ ಸರಕಾರವನ್ನು ಕುಟುಕಿದರು .
ವಿಶ್ವಕ್ಕೆ ಮಾದರಿಯಾದ ಹಿಂದು ಧರ್ಮದ ಮೇಲೆ ನಿರಂತರ ದಾಳಿಯಾಗುತ್ತಿದೆ . ದೇಶ ಉಳಿಸಲು ವೀರರ,ಸಂಘರ್ಷದ ಇತಿಹಾಸಗಳು ಬೇಕು ಹೊರತು ಶಾಂತಿ ಪಾಲನೆಯ ಇತಿಹಾಸವಲ್ಲ ಎಂದರು.
ಶ್ರೀ ರಾಮ ಸೇನಾ ಸ್ಥಾಪಕಧ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನು ದೇವಾಲಯ ವತಿಯಿಂದ ಸನ್ಮಾನಿಸಲಾಯಿತು.ಮಹಾಲಕ್ಷ್ಮಿ ದೇವಸ್ಥಾನ ಮೊಕ್ತೇಸರ ಅಶೋಕ್ ನಾಯಕ್ , ಕಾರ್ಕಳ ತಾಲೂಕು ರಾಜಪುರ ಸಾರಸ್ವತ ಸಂಘದ ಅಧ್ಯಕ್ಷ ಸದಾಶಿವ ಪ್ರಭು ಕಡ್ತಲ ಉಪಸ್ಥಿತರಿದ್ದರು. ಪ್ರೇಮಾನಂದ ಜೋಷಿ ಕಡ್ತಲ ನಿರೂಪಿಸಿದರು.