ಮಂಗಳೂರು, ಅ 4 (DaijiworldNews/HR): ನಗರದ ಉತ್ತರ ಠಾಣೆ ಪೊಲೀಸರು ಅನುಮಾನಾಸ್ಪದ ವರ್ತನೆ ತೋರಿದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ಪೊಲೀಸ್ ಇನ್ಸ್ಪೆಕ್ಟರ್ ನಾಗರಾಜ ಎಸ್ ರೌಂಡ್ಸ್ ನಲ್ಲಿದ್ದಾಗ ಕುದ್ರೋಳಿ ಅಳಕೆ ಮಾರುಕಟ್ಟೆ ಪ್ರದೇಶದ ಬಳಿ ಇಬ್ಬರು ವ್ಯಕ್ತಿಗಳು ಸಿಕ್ಕಿವಿದಿದ್ದು, ವಿಚಾರಣೆ ನಡೆಸಿದಾಗ ಒಬ್ಬರು ಕೋಡಿಕಲ್ ನಿವಾಸಿ ಪ್ರಮೋದರಾಜ್ (46), ಮತ್ತೊಬ್ಬರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಮೂಲದ ಓಂಕಾರ ಮೂರ್ತಿ (49) ಎಂಬುದು ಬೆಳಕಿಗೆ ಬಂದಿದೆ.
ಇವರಿಬ್ಬರು ಕಳ್ಳತನ ಅಥವಾ ಇನ್ನಾವುದೇ ಅಪರಾಧಕ್ಕೆ ಯೋಜನೆ ರೂಪಿಸಿರುವ ಶಂಕೆ ಇರುವುದರಿಂದ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.